ADVERTISEMENT

ಅಪಘಾತ: ಪ್ರಧಾನಿ ಪತ್ನಿಗೆ ಗಾಯ

ಪಿಟಿಐ
Published 7 ಫೆಬ್ರುವರಿ 2018, 19:35 IST
Last Updated 7 ಫೆಬ್ರುವರಿ 2018, 19:35 IST
ಜಶೋದಾ ಬೆನ್    ಕೃಪೆ: ಎಎನ್‍ಐ
ಜಶೋದಾ ಬೆನ್ ಕೃಪೆ: ಎಎನ್‍ಐ   

ಜೈಪುರ: ರಾಜಸ್ಥಾನದ ಚಿತ್ತೂರು ಜಿಲ್ಲೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಗಾಯಗೊಂಡಿದ್ದಾರೆ. ಚಿತ್ತೋರಗಡದಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸಂಬಂಧಿ ಬಸಂತ್ ಭಾಯ್ ಮೋದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬುಧವಾರ ಬೆಳಿಗ್ಗೆ ಅವರು ಪ್ರಯಾಣಿಸುತ್ತಿದ್ದ ಇನೋವಾ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಚಾಲಕನ ಸಹಿತ ಏಳು ಜನ ಕಾರಿನಲ್ಲಿ ಇದ್ದರು. ಇವರೆಲ್ಲ ಬರಾನ್ ಜಿಲ್ಲೆಯಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಿ ಗುಜರಾತ್‌ಗೆ ವಾಪಸಾಗುತ್ತಿದ್ದರು.

ನರೇಂದ್ರ ಮೋದಿ ಅವರಿಂದ ದೂರವಾದ ನಂತರ ಜಶೋದಾ ತಮ್ಮ ಸೋದರ ಅಶೋಕ್ ಮೋದಿ ಅವರೊಂದಿಗೆ ನೆಲೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.