ADVERTISEMENT

ಕಾಶ್ಮೀರ ಜೈಲಿನ ಕುಖ್ಯಾತ ಉಗ್ರರು ಜಮ್ಮುಗೆ

ಭದ್ರತಾ ವ್ಯವಸ್ಥೆ ಕಾರಣಕ್ಕೆ ಸ್ಥಳಾಂತರ: ಕಾರಾಗೃಹ ಇಲಾಖೆ ಅಧಿಕಾರಿಗಳ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST

ಶ್ರೀನಗರ: ಕಾಶ್ಮೀರದ ವಿವಿಧ ಜೈಲುಗಳಲ್ಲಿ ಇರುವ ಅತಿ ಅಪಾಯಕಾರಿ ಉಗ್ರರನ್ನು ಜಮ್ಮುವಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

ಪೊಲೀಸರ ವಶದಲ್ಲಿದ್ದ ಲಷ್ಕರ್‌–ಎ–ತಯ್ಯಬಾ ಸಂಘಟನೆಯ ಉಗ್ರ ನವೀದ್‌ ಜಟ್‌ ಅಲಿಯಾಸ್‌ ಅಬು ಹಂಜುಲ್ಲಾ ಕಳೆದ ವಾರ ಪರಾರಿಯಾಗಿದ್ದ. ಈ ಪ್ರಕರಣದ ಬಳಿಕ ಕಾಶ್ಮೀರದಲ್ಲಿನ ಜೈಲುಗಳ ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದಾಗ ಲೋಪದೋಷಗಳು ಪತ್ತೆಯಾಗಿದ್ದವು. ಇಂತಹ ಅವ್ಯವಸ್ಥೆಯಲ್ಲಿ ವಿವಿಧ ಸಂಘಟನೆಗಳಿಗೆ ಸೇರಿದ ಕುಖ್ಯಾತ ಉಗ್ರರನ್ನು ಬಂಧಿಸಿಡುವುದು ಕಷ್ಟಸಾಧ್ಯ ಎನ್ನುವ ಅಭಿಪ್ರಾಯ ಅಧಿಕಾರಿಗಳು ವ್ಯಕ್ತಪಡಿಸಿದ್ದರು.

ಹೀಗಾಗಿ,  ಸಮರ್ಪಕ ಭದ್ರತಾ ಕ್ರಮಗಳನ್ನು ಕೈಗೊಂಡ ಬಳಿಕ ಉಗ್ರರನ್ನು ಸ್ಥಳಾಂತರಿಸಲಾಗುವುದು ಎಂದರು.

ADVERTISEMENT

***

ಶ್ರೀನಗರದ ಕೇಂದ್ರ ಜೈಲಿನಲ್ಲಿರುವ ಕುಖ್ಯಾತ ಉಗ್ರರನ್ನು ಜಮ್ಮುವಿನ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುವುದು
 –ಶೇಷ್‌ ಪಾಲ್‌ ಜಮ್ಮು ಮತ್ತು ಕಾಶ್ಮೀರ, ಪೊಲೀಸ್‌ ಮಹಾನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.