ADVERTISEMENT

ಚೀನಾದ ‘ಒನ್‌ ಬೆಲ್ಟ್‌; ಒನ್‌ ರೋಡ್‌’ಗೆ ಭಾರತ ಸೇರಿ ನಾಲ್ಕು ರಾಷ್ಟ್ರಗಳಿಂದ ಪರ್ಯಾಯ ಯೋಜನೆ

ಏಜೆನ್ಸೀಸ್
Published 20 ಫೆಬ್ರುವರಿ 2018, 6:47 IST
Last Updated 20 ಫೆಬ್ರುವರಿ 2018, 6:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚೀನಾದ ‘ಒನ್‌ ಬೆಲ್ಟ್‌; ಒನ್‌ ರೋಡ್‌’ಗೆ ಪರ್ಯಾಯವಾಗಿ ಮೂಲಸೌಕರ್ಯ ಯೋಜನೆಯೊಂದನ್ನು ರೂಪಿಸಲು ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಮುಂದಾಗಿವೆ.

ಆಸ್ಟ್ರೇಲಿಯಾದ ಪ್ರಧಾನಿ ಮಾಲ್ಕಂ ಟರ್ನ್‌ಬುಲ್ ಅವರು ಈ ವಾರದ ಕೊನೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡಲಿದ್ದು, ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ‘ಒನ್‌ ಬೆಲ್ಟ್‌; ಒನ್‌ ರೋಡ್‌’ಗೆ ಪರ್ಯಾಯ ಯೋಜನೆ ಬಗ್ಗೆಯೂ ಮಾತುಕತೆ ನಡೆಯಲಿದೆ ಎಂಬುದಾಗಿ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಆಸ್ಟ್ರೇಲಿಯನ್ ಫೈನಾನ್ಶಿಯಲ್ ರಿವ್ಯೂ ವರದಿ ಮಾಡಿದೆ.

ಯೋಜನೆ ಕುರಿತಾದ ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಹೀಗಾಗಿ ಉಭಯ ನಾಯಕರ ಭೇಟಿ ವೇಳೆ ಯೋಜನೆಯ ಬಗ್ಗೆ ಘೋಷಣೆ ಹೊರಡಿಸುವ ಸಾಧ್ಯತೆ ಇಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ನ ಬಹುಭಾಗಗಳನ್ನು ಬೆಸೆಯುವ ಆರ್ಥಿಕ ವಲಯ ಮತ್ತು ರಸ್ತೆ ನಿರ್ಮಾಣ ಮಾಡಲು ಚೀನಾ ಹಮ್ಮಿಕೊಂಡಿರುವ ಯೋಜನೆಯಾಗಿದೆ ‘ಒನ್‌ ಬೆಲ್ಟ್‌; ಒನ್‌ ರೋಡ್‌’. ಇದನ್ನು ಒಬಿಒಆರ್‌ ಎಂದೂ ಕರೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.