ADVERTISEMENT

ಕೋವಿಡ್‌: 610ಕ್ಕೆ ಏರಿದ ಎಕ್ಸ್‌ಬಿಬಿ 1.16 ತಳಿಯ ಪ್ರಕರಣ

ಪಿಟಿಐ
Published 27 ಮಾರ್ಚ್ 2023, 14:31 IST
Last Updated 27 ಮಾರ್ಚ್ 2023, 14:31 IST
   

ನವದೆಹಲಿ (ಪಿಟಿಐ): ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ರೂಪಾಂತರಿ ಎಕ್ಸ್‌ಬಿಬಿ 1.16 ತಳಿಯ ಸೋಂಕಿನ ಪ್ರಕರಣಗಳ ಸಂಖ್ಯೆ 610ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ವೈರಾಣು ಸಂರಚನೆ ವಿಶ್ಲೇಷಣೆ ಸಂಸ್ಥೆಯ (ಐಎನ್‌ಎಸ್‌ಎಸಿಒಜಿ) ಅಂಕಿಅಂಶ ತಿಳಿಸಿದೆ.

ಕೇಂದ್ರಾಡಳಿತ ಪ್ರದೇಶ ಮತ್ತು 11 ರಾಜ್ಯಗಳಲ್ಲಿ ಸೋಂಕು ಕಂಡುಬಂದಿದೆ. ಕರ್ನಾಟಕದಲ್ಲಿ 86 ಪ್ರಕರಣ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ತಲಾ 164 ಪ್ರಕರಣ ಹಾಗೂ ತೆಲಂಗಾಣದಲ್ಲಿ 93 ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.