ADVERTISEMENT

7 ಕಂಪೆನಿಗಳ ನೂಡಲ್ಸ್ ಪರೀಕ್ಷೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 8 ಜೂನ್ 2015, 10:18 IST
Last Updated 8 ಜೂನ್ 2015, 10:18 IST

ನವದೆಹಲಿ (ಪಿಟಿಐ): ಮ್ಯಾಗಿ ವಿವಾದದ ಹಿನ್ನೆಲೆಯಲ್ಲಿ ಏಳು ಕಂಪೆನಿಗಳ ವಿವಿಧ ಬಗೆ ನೂಡಲ್ಸ್‌ಗಳನ್ನು ಪರೀಕ್ಷೆ ನಡೆಸುವಂತೆ ರಾಷ್ಟ್ರೀಯ ಆಹಾರ ಭದ್ರತೆ ಹಾಗೂ ಗುಣಮಟ್ಟ ಪ್ರಾಧಿಕಾರವು ಸೋಮವಾರ ಆದೇಶಿಸಿದೆ.

‘ಮ್ಯಾಗಿ ನ್ಯೂಟ್ರಿಲಿಸಿಯಸ್‌ ಪಝಟಾ’ದ ನಾಲ್ಕು ಮಾದರಿಗಳನ್ನೂ ಪರೀಕ್ಷೆಗೆ ಒಳಪಡಿಸುವಂತೆ ಎಫ್‌ಎಸ್‌ಎಸ್‌ಎಐ ನಿರ್ದೇಶಿಸಿದೆ.

‘ಮ್ಯಾಗಿ ಹಾಗೂ ಅಂಥ ಇತರೆ ಕೆಲವು ಉತ್ಪನ್ನಗಳ ಮೇಲಿನ ಪರೀಕ್ಷೆಗಳು ಆರೋಗ್ಯದ ಬಗ್ಗೆ ಗಂಭೀರ ಆತಂಕ ವ್ಯಕ್ತ ಪಡಿಸಿವೆ.
ಆದ್ದರಿಂದ ಎಫ್‌ಎಸ್‌ಎಸ್‌ಎಐ ಅನುಮೋದಿಸಿರುವ ಇಂತಹ ಇತರ ಉತ್ಪನ್ನಗಳ ಮಾದರಿಗಳನ್ನು ಅಧಿಕೃತ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸುವುದು ಸೂಕ್ತ’ ಎಂದು ಎಫ್‌ಎಸ್‌ಎಸ್‌ಎಐ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಸ್. ಮಲೀಕ್‌ ಅವರು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತೆ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ.

ADVERTISEMENT

ನೆಸ್ಲೆ ಇಂಡಿಯಾ, ಐಟಿಸಿ,ಇಂಡೊ–ನಿಸಿನ್ ಫುಡ್‌ ಲಿಮಿಟೆಡ್‌,  ಜಿಎಸ್‌ಕೆ ಕಂಸೂಮರ್‌ ಹೆಲ್ತ್‌ಕೇರ್‌, ಸಿಜಿ ಫುಡ್ಸ್‌ ಇಂಡಿಯಾ, ರುಚಿ ಇಂಟರ್‌ನ್ಯಾಷನಲ್‌ ಹಾಗೂ ಎಎ ನ್ಯೂಟ್ರಿಷಿಯನ್‌ ಲಿಮಿಟೆಡ್‌ ಕಂಪೆನಿಗಳು ಎಫ್‌ಎಸ್‌ಎಸ್‌ಎಐ ಹೊರಡಿಸಿರುವ ಏಳು ಕಂಪೆನಿಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.