ADVERTISEMENT

ಫೋಕ್ಸೊ ಪ್ರಕರಣ: 22 ವರ್ಷದ ಹುಡುಗನಿಗೆ 20 ವರ್ಷ ಕಠಿಣ ಸಜೆ

ಪಿಟಿಐ
Published 19 ಮಾರ್ಚ್ 2023, 9:52 IST
Last Updated 19 ಮಾರ್ಚ್ 2023, 9:52 IST
–ಸಾಂಕೇತಿಕ ಚಿತ್ರ
–ಸಾಂಕೇತಿಕ ಚಿತ್ರ   

ಭದೋಹಿ (ಉತ್ತರ ಪ್ರದೇಶ): ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದ ಪ್ರಕರಣದಲ್ಲಿ 22 ವರ್ಷದ ಹುಡುಗನೊಬ್ಬನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ವಿಧಿಸಿದೆ.

ಇದು 2022 ಮಾ.9ರಿಂದ ಶುರುವಾದ ಕಾನೂನು ಹೋರಾಟವಾಗಿದ್ದು ಕೊನೆಗೂ ಆರೋಪಿ ಅಜಯ್ ಕುಮಾರ್ ಯಾದವ್‌ಗೆ ಶಿಕ್ಷೆ ಘೋಷಣೆಯಾಗಿದೆ.

ಫೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯ ಹಕ್ಕು) ಕಾನೂನಿನಡಿ ದಾಖಲಾದ ಈ ಪ್ರಕರಣದ ಕುರಿತು ನ್ಯಾಯಮೂರ್ತಿ ಮಧು ಡೋಗ್ರಾ ಅವರು ಅಪರಾಧಿಗೆ ಸೆರೆಮನೆ ವಾಸದ ಜತೆಗೆ ₹ 33 ಸಾವಿರ ದಂಡ ವಿಧಿಸಿದ್ದು, ಅದರಲ್ಲಿ ಬಾಲಕಿಗೆ ₹ 25 ಸಾವಿರ ಕೊಡಬೇಕಾಗುತ್ತದೆ ಎಂದು ಭಾನುವಾರ ಆದೇಶಿಸಿದರು.

ADVERTISEMENT

ಅಪರಾಧಿಯು ಎಪ್ರಿಲ್ 29ರಂದು ಎಂಟನೇ ತರಗತಿ ಓದುತ್ತಿದ್ದ 16 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದನು. ಈ ಕುರಿತು ಬಾಲಕಿಯ ತಂದೆಯು ಅಜಯ್‌ ವಿರುದ್ಧ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.