ADVERTISEMENT

ಚಾಲನಾ ಪರವಾನಗಿಗೆ ಆಧಾರ್‌ ಜೋಡಣೆ ಕಡ್ಡಾಯ

ಸದ್ಯದಲ್ಲೇ ಹೊಸ ನಿಯಮ: ರವಿಶಂಕರ್ ಪ್ರಸಾದ್‌

ಪಿಟಿಐ
Published 6 ಜನವರಿ 2019, 20:17 IST
Last Updated 6 ಜನವರಿ 2019, 20:17 IST
ರವಿಶಂಕರ್ ಪ್ರಸಾದ್‌
ರವಿಶಂಕರ್ ಪ್ರಸಾದ್‌   

ಫಗ್ವಾರ: ಚಾಲನಾ ಪರವಾನಗಿ ಪತ್ರದ (ಡಿ.ಎಲ್‌) ಜತೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದು ಸದ್ಯದಲ್ಲೇ ಕಡ್ಡಾಯವಾಗಲಿದೆ.

‘ಆಧಾರ್‌– ಚಾಲನಾ ಪರವಾನಗಿ ಪತ್ರದ ಜೋಡಣೆ ಸಂಬಂಧ ಹೊಸ ನಿಯಮವನ್ನು ಸರ್ಕಾರ ಜಾರಿಗೆ ತರಲಿದೆ’ ಎಂದು ಕಾನೂನು, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್‌ ಹೇಳಿದ್ದಾರೆ.

‘ಸದ್ಯ ಯಾರಾದರೂ ಅಪಘಾತ ಮಾಡಿ ಪರಾರಿಯಾದರೆ, ನಕಲಿ ಚಾಲನಾ ಪರವಾನಗಿ ಪತ್ರ ಪಡೆದುಕೊಳ್ಳುತ್ತಾರೆ. ಯಾವುದೇ ಶಿಕ್ಷೆ ಇಲ್ಲದೆ ತಪ್ಪಿಸಿಕೊಳ್ಳಲು ಇದು ಅವರಿಗೆ ನೆರವಾಗುತ್ತದೆ. ಒಂದು ವೇಳೆ ಆಧಾರ್‌ ಜೋಡಣೆಯಾಗಿದ್ದರೆ, ನೀವು ನಿಮ್ಮ ಹೆಸರನ್ನು ಬದಲಿಸಬಹುದು ಅಷ್ಟೆ ಹೊರತು ನಿಮ್ಮ ಜೈವಿಕ ಮಾಹಿತಿಯನ್ನು ಬದಲಿಸಲು ಸಾಧ್ಯವಿಲ್ಲ. ಅದು ಕಣ್ಣಿನ ಪಾಪೆಯ ಗುರುತು ಆಗಿರಬಹುದು ಇಲ್ಲವೇ ಬೆರಳಚ್ಚು ಆಗಿರಬಹುದು’ ಎಂದು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.