ADVERTISEMENT

ಕಾರು ಅಪಘಾತ: ಛತ್ತೀಸಗಢ ಚುನಾವಣಾ ಕರ್ತವ್ಯದಲ್ಲಿದ್ದ ಮೂವರು ಶಿಕ್ಷಕರು ಸಾವು

ಪಿಟಿಐ
Published 8 ನವೆಂಬರ್ 2023, 10:40 IST
Last Updated 8 ನವೆಂಬರ್ 2023, 10:40 IST
<div class="paragraphs"><p>ಅಪಘಾತ</p></div>

ಅಪಘಾತ

   

(ಸಾಂದರ್ಭಿಕ ಚಿತ್ರ)

ಕೊಂಡಗಾಂವ್(ಛತ್ತೀಸಗಢ): ಛತ್ತೀಸಗಢದ ಕೊಂಡಗಾಂವ್ ಜಿಲ್ಲೆಯಲ್ಲಿ ಕಾರು ಮತ್ತು ಟ್ರಕ್‌ ನಡುವೆ ಅಪಘಾತ ಸಂಭವಿಸಿದೆ. ಚುನಾವಣಾ ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದ ಇಬ್ಬರು ಶಿಕ್ಷಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಒಬ್ಬ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಇವಿಎಂಗಳನ್ನು ನಿಗದಿತ ಸ್ಥಳಕ್ಕೆ ಹಿಂತಿರುಗಿಸಿ ಕಾರಿನಲ್ಲಿ ಮರಳುತ್ತಿದ್ದ ಶಿಕ್ಷಕರು ಕೊಂಡಗಾಂವ್ ಜಿಲ್ಲೆಯ ಬಹಿಗಾಂವ್‌ ಹಳ್ಳಿಯ ಬಳಿ ಅಪಘಾತಕ್ಕೆ ಈಡಾಗೀದ್ದಾರೆ. ಇಬ್ಬರು ಶಿಕ್ಷಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೊಬ್ಬರು ಚಿಕಿತ್ಸೆ ಫಲಿಸದೆ ಕೊನೆಯುಸಿರು ಎಳೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ

ಮೃತರನ್ನು ಶಿವ ನೇತಮ್, ಸಂತ್ರಮ್ ನೇತಮ್ ಮತ್ತು ಹರೇಂದ್ರ ಉಯ್ಕೆ ಎಂದು ಗುರುತಿಸಲಾಗಿದೆ.

ಛತ್ತೀಸಗಢ ರಾಜ್ಯದಲ್ಲಿ ಮೊದಲ ಹಂತದಲ್ಲಿ 20 ವಿಧಾನಸಭಾ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆದಿದೆ. ನವೆಂಬರ್‌ 17ರಂದು ಎರಡನೇ ಹಂತದ ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.