ADVERTISEMENT

ಚಿನ್ನ ಕಳ್ಳಸಾಗಣೆ ಪ್ರಕರಣ: ಸ್ವಪ್ನಾ ಸುರೇಶ್‌ಗೆ ಜೀವ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 16:20 IST
Last Updated 3 ಜುಲೈ 2022, 16:20 IST
ಸ್ವಪ್ನಾ ಸುರೇಶ್‌
ಸ್ವಪ್ನಾ ಸುರೇಶ್‌   

ತಿರುವನಂತಪುರ (ಪಿಟಿಐ): ರಾಜತಾಂತ್ರಿಕ ಮಾರ್ಗ ಬಳಸಿಕೊಂಡು ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು, ಪ್ರಕರಣಕ್ಕೆ ಸಂಬಂಧಿಸಿಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಕುಟುಂಬ ಅಥವಾ ಎಲ್‌ಡಿಎಫ್ ಶಾಸಕ ಕೆ.ಟಿ. ಜಲೀಲ್ ಅವರ ಹೆಸರು ಹೇಳುವುದನ್ನು ಮುಂದುವರಿಸಿದರೆ ಪ್ರಾಣ ತೆಗೆಯುವುದಾಗಿ ಬೆದರಿಕೆಯ ಕರೆ ಜುಲೈ 2ರ ಬೆಳಿಗ್ಗೆಯಿಂದ ಬರುತ್ತಿವೆ ಎಂದು ಭಾನುವಾರ ಆರೋಪಿಸಿದ್ದಾರೆ.

ಬೆದರಿಕೆ ಕರೆಯ ಧ್ವನಿ ಮುದ್ರಣ ಬಿಡುಗಡೆ ಮಾಡಿರುವ ಸ್ವಪ್ನಾ ಸುರೇಶ್‌, ಈ ಹಿಂದೆಯೂ ತನಗೆ ಇದೇ ರೀತಿಯ ಬೆದರಿಕೆಗಳು ಇಂಟರ್‌ನೆಟ್‌ ಕರೆಗಳ ಮೂಲಕ ಬರುತ್ತಿದ್ದವು. ಆದರೆ, ಅವುಗಳನ್ನು ಎಂದಿಗೂ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಹೇಳಿದರು.

‘ಆದರೆ, ಈಗ ತಮ್ಮ ವಿಳಾಸ ಮತ್ತು ಗುರುತು ಹೇಳಿಕೊಂಡು, ನನ್ನನ್ನು ಮುಗಿಸಿಬಿಡುವುದಾಗಿಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಧ್ವನಿ ಮುದ್ರಣಗಳನ್ನು ಪೊಲೀಸರಿಗೆ ಒಪ್ಪಿಸಿದ್ದೇನೆ. ಅವರು ಏನು ಕ್ರಮಕೈಗೊಳ್ಳಲಿದ್ದಾರೆ ಎನ್ನುವುದನ್ನು ಕಾದುನೋಡಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.