ADVERTISEMENT

ವಿಶಾಲ್ ಕೈಯಲ್ಲಿ ಬಿಯರ್ ಬಾಟಲ್!

ವಿವಾದ ಸೃಷ್ಟಿಸಿದ ಸಿನಿಮಾ ಪೋಸ್ಟರ್

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 16:48 IST
Last Updated 21 ನವೆಂಬರ್ 2018, 16:48 IST
ನಟ ವಿಶಾಲ್
ನಟ ವಿಶಾಲ್   

ಚೆನ್ನೈ: ತಮಿಳು ನಟ ವಿಶಾಲ್ ಅವರು ಕೈಯಲ್ಲಿ ಬಿಯರ್ ಬಾಟಲ್ ಹಿಡಿದು ಪೋಸ್ ನೀಡಿರುವ ಚಿತ್ರ ವಿವಾದ ಸೃಷ್ಟಿಸಿದೆ.ಪೊಲೀಸ್ ಅಧಿಕಾರಿ ಪಾತ್ರ ಮಾಡಿರುವ ಅವರು ಕಪ್ಪು ಕನ್ನಡಕ ಧರಿಸಿ ಜೀಪ್‌ನ ಬಾನೆಟ್ ಮೇಲೆ ಕುಳಿತಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಶಾನ್ ನಟನೆಯ ‘ಅಯೋಗ್ಯ’ ಸಿನಿಮಾದ ಪೋಸ್ಟರ್‌ಗೆ ಪಿಎಂಕೆ ಮುಖ್ಯಸ್ಥ ಎಸ್.ರಾಮದಾಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತಕ್ಷಣ ಅದನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

‘ಈ ಪೋಸ್ಟರ್ ಮೂಲಕ ವಿಶಾಲ್ ಅವರು ಏನನ್ನು ಹೇಳಲು ಹೊರಟಿದ್ದಾರೆ?’ ಎಂದು ಪ್ರಶ್ನಿಸಿರುವ ಅವರು ವಿಶಾಲ್ ಅವರಿಂದ ಸಾಮಾಜಿಕ ಬದ್ಧತೆಯನ್ನು ಬಯಸುತ್ತೇನೆ ಎಂದಿದ್ದಾರೆ.

ADVERTISEMENT

ನಾಡಿಗಾರ್ ಸಂಘಂ ಪ್ರಧಾನ ಕಾರ್ಯದರ್ಶಿಯೂ ಆಗಿರುವವಿಶಾಲ್, ತಮಿಳು ಸಿನಿಮಾ ನಿರ್ಮಾಪಕರ ಮಂಡಳಿಯ ಅಧ್ಯಕ್ಷರೂ ಹೌದು.ತೆರೆ ಮೇಲೆ ಕಲಾವಿದರು ಸಿಗರೇಟ್ ಸೇದುವುದನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದ ವಿಶಾಲ್ ಅವರಿಗೆ ಈ ಮೊದಲು ಪತ್ರ ಬರೆದಿದ್ದನ್ನು ರಾಮದಾಸ್ ಅವರು ನೆನಪಿಸಿದ್ದಾರೆ.

ಪೋಸ್ಟರ್ ಹಿಂಪಡೆಯಲಾಗಿದ್ದು, ಚಿತ್ರದ ಪ್ರಚಾರಕ್ಕೆ ಬಳಸದಿರಲು ನಿರ್ಧರಿಸಲಾಗಿದೆ.ಸಿಗರೇಟ್ ಹಿಡಿದು ಪೋಸ್ ನೀಡಿದ್ದ ವಿಜಯ್ ಅಭಿನಯದ ಸರ್ಕಾರ್ ಚಿತ್ರಕ್ಕೂ ಪಿಎಂಕೆ ಆಕ್ಷೇಪ ಎತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.