ADVERTISEMENT

ರಾಯಭಾರ ಕಚೇರಿ ಮುಚ್ಚಿದ ಅಫ್ಗಾನಿಸ್ತಾನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2023, 15:36 IST
Last Updated 24 ನವೆಂಬರ್ 2023, 15:36 IST
ನವದೆಹಲಿಯಲ್ಲಿರುವ ಅಫ್ಗಾನಿಸ್ತಾನ ರಾಯಭಾರ ಕಚೇರಿ –ಎಎಫ್‌ಪಿ ಚಿತ್ರ
ನವದೆಹಲಿಯಲ್ಲಿರುವ ಅಫ್ಗಾನಿಸ್ತಾನ ರಾಯಭಾರ ಕಚೇರಿ –ಎಎಫ್‌ಪಿ ಚಿತ್ರ   

ನವದೆಹಲಿ: ‘ಭಾರತದಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಮುಚ್ಚಲಾಗುವುದು’ ಎಂದು ಅಫ್ಗಾನಿಸ್ತಾನದ ತಾಲಿಬಾನ್ ಸರ್ಕಾರವು ಶುಕ್ರವಾರ ಘೋಷಿಸಿದೆ.

ಭಾರತವು ಸೇರಿದಂತೆ ಅನೇಕ ರಾಷ್ಟ್ರಗಳು ಅಫ್ಗಾನಿಸ್ತಾನದ ತಾಲಿಬಾನ್ ಸರ್ಕಾರಕ್ಕೆ ಅಧಿಕೃತ ಮಾನ್ಯತೆ ನೀಡಿಲ್ಲ. ಆದರೆ, ಆಡಳಿತ ವ್ಯವಸ್ಥೆ ಎಂದು ಒಪ್ಪಿಕೊಂಡಿವೆ.

ಪಾಶ್ಚಿಮಾತ್ಯರ ಸಹಕಾರದಿಂದ ಕಾಬೂಲ್‌ನಲ್ಲಿ ಆಡಳಿತ ನಡೆಸುತ್ತಿದ್ದ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ರಾಜತಾಂತ್ರಿಕರು, ತಾಲಿಬಾನ್ ಆಡಳಿತ ಆಯ್ಕೆ ಮಾಡಿದ ಪ್ರತಿನಿಧಿಗಳಿಗೆ ರಾಯಭಾರ ಕಚೇರಿ ಮತ್ತು ಆಸ್ತಿಯ ನಿಯಂತ್ರಣವನ್ನು ಬಿಟ್ಟುಕೊಡಲು ನಿರಾಕರಿಸಿದ್ದಾರೆ. ಇದರಿಂದ ವಿವಿಧ ದೇಶಗಳಲ್ಲಿರುವ ಅಫ್ಗನ್‌ ರಾಯಭಾರ ಕಚೇರಿ, ದೂತವಾಸಗಳು ತ್ರಿಶಂಕು ಸ್ಥಿತಿಯಲ್ಲಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.