ADVERTISEMENT

ಭಾರತದಲ್ಲಿ ಆಶ್ರಯ ಪಡೆಯಲು 736 ಅಫ್ಗನ್ನರಿಂದ ಹೊಸದಾಗಿ ಅರ್ಜಿ

ಪಿಟಿಐ
Published 15 ಸೆಪ್ಟೆಂಬರ್ 2021, 8:54 IST
Last Updated 15 ಸೆಪ್ಟೆಂಬರ್ 2021, 8:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಆಗಸ್ಟ್‌ 1 ರಿಂದ ಸೆಪ್ಟೆಂಬರ್ 11ರ ವರೆಗೆ ಒಟ್ಟು 736 ಅ‌ಫ್ಗಾನಿಸ್ತಾನದ ಪ್ರಜೆಗಳು ಭಾರತದಲ್ಲಿ ಆಶ್ರಯ ಕೇಳಿ ಅರ್ಜಿ ಸಲ್ಲಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ನಿರಾಶ್ರಿತರ ಹೈಕಮಿಷನರ್‌ ಕಚೇರಿ (ಯುಎನ್‌ಎಚ್‌ಸಿಆರ್‌) ಹೇಳಿಕೆ ತಿಳಿಸಿದೆ.

ಭಾರತದಲ್ಲಿ ಆಶ್ರಯಕ್ಕಾಗಿ ಹಾಗೂ ನೆರವು ಕೇಳಿ ಅರ್ಜಿಸಲ್ಲಿಸುವ ಅಫ್ಗನ್ನರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಸಂಸ್ಥೆ ತಿಳಿಸಿದೆ.

ಅಫ್ಗನ್‌ ಪ್ರಜೆಗಳಿಗೆ, ವೀಸಾ ಪೂರೈಕೆ ಮತ್ತು ಇರುವ ವೀಸಾ ಅವಧಿಯ ವಿಸ್ತರಣೆಗೆ ನೆರವಾಗುವುದು ಸೇರಿದಂತೆ ಹಲವು ಪರಿಹಾರ ಕಾರ್ಯಗಳ ಕುರಿತು ಭಾರತ ಸರ್ಕಾರದೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ ಎಂದು ಯುಎನ್‌ಎಚ್‌ಸಿಆರ್‌ ತಿಳಿಸಿದೆ.

ADVERTISEMENT

ಸದ್ಯ ಲಭ್ಯ ಮಾಹಿತಿ ಪ್ರಕಾರ, ಭಾರತದಲ್ಲಿ ಯುಎನ್‌ಎಚ್‌ಸಿಆರ್‌ ಮೂಲಕ ಭಾರತದಲ್ಲಿ ಆಶ್ರಯ ಪಡೆದಿರುವವರ ಸಂಖ್ಯೆ 43,157 . ಇವರಲ್ಲಿ ನಿರಾತ್ರಿತರು ಹಾಗೂ ಅಫ್ಗಾನಿಸ್ತಾನದಿಂದ ವಲಸೆ ಬಂದು ಆಶ್ರಯ ಪಡೆದವರು 15,559 ಮಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.