ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಪಿಟಿಐ
ಪಿಲಿಭಿತ್: ಆರು ದಶಕಗಳ ಹಿಂದೆ ಪೂರ್ವ ಪಾಕಿಸ್ತಾನದಿಂದ (ಈಗಿನ ಬಾಂಗ್ಲಾದೇಶ) ವಲಸೆ ಬಂದು ಫಿಲಿಬಿತ್ ಜಿಲ್ಲೆಯ ವಿವಿಧ 25 ಗ್ರಾಮಗಳಲ್ಲಿ ನೆಲೆಸಿದ್ದ 2,196 ನಿರಾಶ್ರಿತ ಕುಟುಂಬದವರಿಗೆ ಭೂ ಮಾಲೀಕತ್ವದ ಹಕ್ಕು ನೀಡಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜ್ಞಾನೇಂದ್ರ ಸಿಂಗ್, ‘ಅಂತಿಮ ಮಾರ್ಗಸೂಚಿ ಬಂದ ತಕ್ಷಣವೇ ಭೂ ಮಾಲೀಕತ್ವದ ಪತ್ರ ನೀಡುವ ಕಾರ್ಯ ಆರಂಭಿಸಲಾಗುವುದು’ ಎಂದರು. ನಿರಾಶ್ರಿತರು 62 ವರ್ಷಗಳಿಂದ ಇಂಥದ್ದೊಂದು ಆದೇಶಕ್ಕಾಗಿ ಕಾಯುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.