ADVERTISEMENT

ಪ್ರವಾಹದ ಭೀತಿಯಲ್ಲಿ ನಾಗಾಲ್ಯಾಂಡ್; ಮಳೆಗೆ 12 ಮಂದಿ ಬಲಿ

ಸಹಾಯ ಹಸ್ತ ಕೋರಿದ ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫಿ ರಿಯೊ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 5:19 IST
Last Updated 31 ಆಗಸ್ಟ್ 2018, 5:19 IST
   

ಕೊಹಿಮಾ: ಕೇರಳದ ನಂತರ ಪ್ರವಾಹದ ಬಿಸಿ ನಾಗಾಲ್ಯಾಂಡ್‌ಗೆ ತಟ್ಟಿದ್ದು, ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ 12 ಮಂದಿ ಸಾವಿಗೀಡಾಗಿದ್ದಾರೆ.

ಕೆಲವೆಡೆ ಭೂಕುಸಿತ ಸಂಭವಿಸಿದೆ.ರಸ್ತೆಗಳು, ಮನೆಗಳು ಜಲಾವೃತಗೊಂಡಿವೆ.

ಇದುವರೆಗೆ 400 ಜಿಲ್ಲೆಗಳ 3000 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ನಾಗಾಲ್ಯಾಂಡ್ ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಹೇಳಿದೆ.

ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫಿ ರಿಯೊ ಅವರು ಮಳೆಯಿಂದಾಗಿ ಪ್ರವಾಹ, ಭೂಕುಸಿತ ಉಂಟಾಗಿದ್ದು, ಈ ಸಂಬಂಧದ ವಿಡಿಯೊವನ್ನು ಟ್ವಿಟರ್‌ನಲ್ಲಿ ಪ್ರಕಟಿಸುವ ಮೂಲಕ ಸಹಾಯ ಕೋರಿದ್ದಾರೆ.

ನೆರವು ನೀಡಬೇಕೆಂದು ಕೋರಿರುವ ರಿಯೊ ಅವರು, ನಾಗಾಲ್ಯಾಂಡ್ ನಿಮ್ಮ ಸಹಾಯಕ್ಕೆ ಹಾತೊರೆಯುತ್ತಿದ್ದು, ಪರಿಹಾರ ನಿಧಿಗೆ ಸಂಬಂಧಿಸಿದ ಬ್ಯಾಂಕ್ ಮಾಹಿತಿಯನ್ನು ಒದಗಿಸಿದ್ದಾರೆ.

ಇವರ ಈ ಟ್ವಿಟ್‌ಗೆ ಸ್ಪಂದಿಸಿದ ಗೃಹ ಸಚಿವ ರಾಜನಾಥ್ ಸಿಂಗ್ ಜನರ ರಕ್ಷಣೆಗೆ ಎನ್‌ಡಿಆರ್‌ಎಫ್ ಪಡೆಯನ್ನು (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ಕಳುಹಿಸಿಕೊಡುವ ಭರವಸೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.