ADVERTISEMENT

ಕುನಾಲ್ ಕಮ್ರಾ ವಿರುದ್ಧ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ

ಪಿಟಿಐ
Published 20 ನವೆಂಬರ್ 2020, 20:52 IST
Last Updated 20 ನವೆಂಬರ್ 2020, 20:52 IST

ನವದೆಹಲಿ : ಸುಪ್ರೀಂ ಕೋರ್ಟ್ಮುಖ್ಯ ನ್ಯಾಯಮೂರ್ತಿ ವಿರುದ್ಧ ಮಾಡಿರುವ ‘ಅಶ್ಲೀಲಕರ ಶೈಲಿಯ ಟ್ವೀಟ್’ಗಾಗಿ ಹಾಸ್ಯ ಭಾಷಣಕಾರ ಕುನಾಲ್ ಕಮ್ರಾ ವಿರುದ್ಧ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆ.ಕೆ.ವೇಣು
ಗೋಪಾಲ್‌ ಅವರು ಶುಕ್ರವಾರ ಅನುಮತಿ ನೀಡಿದ್ದಾರೆ.

ನಿಂದನೆ ಮೊಕದ್ದಮೆ ದಾಖಲಿಸಲು ಅಟಾರ್ನಿ ಜನರಲ್ ಅವರ ಅನುಮೋದನೆ ಅಗತ್ಯವಾಗಿದೆ. ನವೆಂಬರ್ 18ರಂದು ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿ ನಿಂದನೆ ಮೊಕದ್ದಮೆ ದಾಖಲಿಸಲು ವಕೀಲ ಅನುಜ್ ಸಿಂಗ್ ಅನುಮೋದನೆ ಕೋರಿದ್ದರು.

ಕಮ್ರಾ ಅವರು ಎರಡು ಬೆರಳು ತೋರಿಸಿರುವ ಕ್ರಮ ಉದ್ದೇಶಪೂರ್ವಕವಾಗಿ ಮುಖ್ಯ ನ್ಯಾಯಮೂರ್ತಿ ಅವರನ್ನು ಅವಮಾನಿಸುವ ಉದ್ದೇಶ ಹೊಂದಿದೆ. ಇದು, ಸುಪ್ರೀಂ ಕೋರ್ಟ್‌ಗೆ ಮಾಡಿದ ಅಪಮಾನಕ್ಕೆ ಸಮನಾದುದು’ ಎಂದು ವೇಣುಗೋಪಾಲ್ ಅವರು ವಕೀಲರಿಗೆ ಅನುಮೋದನೆ ನೀಡಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.