ADVERTISEMENT

ಪಕ್ಷದ ವತಿಯಿಂದ 'ಸೆಂಟ್ ಆಫ್ ಸೋಶಿಯಲಿಸಂ' ಸುಗಂಧ ದ್ರವ್ಯ ಬಿಡುಗಡೆ ಮಾಡಿದ ಅಖಿಲೇಶ್

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 13:42 IST
Last Updated 9 ನವೆಂಬರ್ 2021, 13:42 IST
   

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷದ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿದ್ದು, ಅದಕ್ಕೆ 'ಸೆಂಟ್ ಆಫ್ ಸೋಶಿಯಲಿಸಂ' (ಸಮಾಜವಾದಿ ಸುಗಂಧ ದ್ರವ್ಯ) ಎಂದು ಹೆಸರಿಡಲಾಗಿದೆ.

ಇದನ್ನು ಪಕ್ಷದ ಎಂಎಲ್‌ಸಿ ಪಮ್ಮಿ ಜೈನ್ ಎನ್ನುವವರು ತಯಾರಿಸಿದ್ದು,ಸ್ವಾಭಾವಿಕವಾಗಿ ಪರಿಮಳ ಬೀರುವ22 ಗಿಡಮೂಲಿಕೆಗಳನ್ನು ಬಳಸಿ ಇದನ್ನು ತಯಾರಿಸಲಾಗಿದೆ. ಇದರ ಪರಿಮಳವು ಬೇರೆ ಉತ್ಪನ್ನಗಳಿಗಿಂತಲೂ ಹೆಚ್ಚುಕಾಲ ಉಳಿಯಲಿದೆ ಎಂದು ತಿಳಿಸಿದ್ದಾರೆ.

ರಾಜಕೀಯ ಪಕ್ಷವೊಂದು ತನ್ನದೇ ಸುಗಂಧ ದ್ರವ್ಯವನ್ನು ಪರಿಚಯಿಸುತ್ತಿರುವುದು ಇದೇ ಮೊದಲು.

ADVERTISEMENT

ಈ ಬಗ್ಗೆ ಮಾತನಾಡಿರುವ ಅಖಿಲೇಶ್ ಯಾದವ್, 'ಜನರು ಇದನ್ನು ಉಪಯೋಗಿಸಿದಾಗ ಸಮಾಜವಾದದ ಸುವಾಸನೆಯನ್ನು ಪಡೆಯಲಿದ್ದಾರೆ. ಇದು 2022ರಲ್ಲಿ ದ್ವೇಷವನ್ನು ಕೊನೆಗಾಣಿಸಲಿದೆ' ಎಂದು ಹೇಳಿದ್ದಾರೆ.

403 ಸದಸ್ಯ ಬಲದ ಉತ್ತರಪ್ರದೇಶ ವಿಧಾನಸಭೆಗೆ2022ರಲ್ಲಿ ಚುನಾವಣೆ ನಡೆಯಲಿದೆ.

ಪಕ್ಷದ ಬಾವುಟದಲ್ಲಿರುವ ಕೆಂಪು ಮತ್ತು ಹಸಿರು ಬಣ್ಣದ ಬಾಕ್ಸ್‌ಗಳಲ್ಲಿ ಸುಗಂಧದ್ರವ್ಯದ ಬಾಟಲಿಗಳನ್ನು ತುಂಬಲಾಗಿದೆ.ಬಾಟಲಿಗಳ ಮೇಲೆ ಪಕ್ಷದ ಹೆಸರು, ಚಿಹ್ನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.