ನವದೆಹಲಿ: ಏರ್ ಇಂಡಿಯಾ ವಿಶೇಷ ವಿಮಾನವು ಢಾಕಾದಿಂದ ಆರು ಮಕ್ಕಳು ಸೇರಿದಂತೆ 205 ಜನರನ್ನು ದೆಹಲಿಗೆ ಬುಧವಾರ ಬೆಳಿಗ್ಗೆ ಹೊತ್ತುತಂದಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮಂಗಳವಾರ ರಾತ್ರಿ ಬಾಂಗ್ಲಾದೇಶದ ರಾಜಧಾನಿಯಿಂದ ವಿಮಾನವು ಹೊರಟಿತ್ತು ಎಂದು ಹೇಳಿದರು.
ಏರ್‌ಇಂಡಿಯಾದ ಎರಡು ವಿಮಾನಗಳು ಬುಧವಾರವೂ ದೆಹಲಿಯಿಂದ ಢಾಕಾಗೆ ಸಂಚರಿಸಲಿವೆ.
ವಿಸ್ತಾರ ಮತ್ತು ಇಂಡಿಯೊ ವಿಮಾನಗಳು ನಿಗದಿಯಂತೆ ಬಾಂಗ್ಲಾದೇಶದ ರಾಜಧಾನಿಗೆ ಸಂಚರಿಸುತ್ತಿವೆ. ಎರಡೂ ವಿಮಾನಯಾನ ಸಂಸ್ಥೆಗಳು ಮಂಗಳವಾರ ಬಾಂಗ್ಲಾಗೆ ವಿಮಾನದ ಸಂಚಾರವನ್ನು ರದ್ದು ಮಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.