ADVERTISEMENT

#MeToo: ಎಐಬಿಯಿಂದ ಹೊರ ನಡೆದ ತನ್ಮಯ್ ಭಟ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2018, 12:55 IST
Last Updated 8 ಅಕ್ಟೋಬರ್ 2018, 12:55 IST
ತನ್ಮಯ್  ಭಟ್
ತನ್ಮಯ್ ಭಟ್   

ನವದೆಹಲಿ: ಜನಪ್ರಿಯ ಕಾಮಿಡಿ ಗ್ರೂಪ್‍ ಎಐಬಿಯ ಪ್ರಮುಖ ಹಾಸ್ಯಗಾರರೊಬ್ಬರಾದ ತನ್ಮಯ್ ಭಟ್ ಈ ಗ್ರೂಪ್‌‍ನಿಂದ ಹೊರ ನಡೆದಿದ್ದಾರೆ. ಎಐಬಿ ಗ್ರೂಪ್‍ನಉತ್ಸವ್ ಚಕ್ರಬೊರ್ತಿ ಎಂಬಾತ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಇದು ತಿಳಿದಿದ್ದರೂ ತನ್ಮಯ್ ಅವರು ಉತ್ಸವ್ ಚಕ್ರಬೊರ್ತಿಯನ್ನು ತಮ್ಮ ಗ್ರೂಪ್‍ನಲ್ಲಿರಿಸಿಕೊಂಡಿದ್ದರು.

ಅದೇ ವೇಳೆ ಎಐಬಿ ಗ್ರೂಪ್‍ನ ಇನ್ನೋರ್ವ ಸದಸ್ಯ ಗುರ್‌ಸಿಮ್ರಾನ್ ಖಂಬಾ ವಿರುದ್ಧವೂ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಖಂಬಾ ಅವರುತಾತ್ಕಾಲಿಕ ರಜೆಯಲ್ಲಿ ತೆರಳಿದ್ದಾರೆ.

ಎಐಬಿ ಮತ್ತು ನಮ್ಮ ಸಹ ಸಂಸ್ಥಾಪಕ, ಸಿಇಒ ತನ್ಮಯ್ ಭಟ್ ಮೇಲೆ ಕೇಳಿ ಬಂದ ಆರೋಪಗಳ ಬಗ್ಗೆ ನಾವು ನಿಗಾ ಇರಿಸುತ್ತಾ ಬಂದಿದ್ದೇವೆ. ತನ್ಮಯ್ ಅವರು ಮುಂದಿನ ಸೂಚನೆ ಸಿಗುವವರೆಗೆ ಎಐಬಿಯಿಂದ ದೂರ ಸರಿಯಲಿದ್ದಾರೆ. ಅಂದರೆ ಇನ್ನು ಮಂದೆ ತನ್ಮಯ್ ಎಐಬಿಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಎಐಬಿ ಹೇಳಿಕೆ ನೀಡಿದೆ.

ADVERTISEMENT

ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಖಂಬಾ ಮೇಲಿದೆ.ತಮ್ಮ ಹೆಸರನ್ನು ಬಹಿರಂಗ ಪಡಿಸಲು ಇಚ್ಛಿಸದ ಮಹಿಳೆಯೊಬ್ಬರು ಟ್ವಿಟರ್‌ನಲ್ಲಿ ಪತ್ರಕರ್ತೆಯೊಬ್ಬರ ಖಾತೆ ಮೂಲಕ ಖಂಬಾ ವಿರುದ್ಧ ಆರೋಪ ಮಾಡಿದ್ದರು.ಆರೋಪಗಳನ್ನು ಖಂಬಾ ನಿರಾಕರಿಸಿದ್ದಾರೆ.

ಏತನ್ಮಧ್ಯೆ, ಎಐಬಿಯ ಭವಿಷ್ಯ ಏನಾಗಬಹುದು ಎಂಬುದರ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಎಐಪಿ ಸಹ ಸಂಸ್ಥಾಪಕರಾದ ಆಶಿಶ್ ಶಕ್ಯಾ ಮತ್ತು ರೋಷನ್ ಜೋಷಿ ಹೇಳಿದ್ದಾರೆ.

ಬಾಲಕಿ ಸೇರಿದಂತೆ ಮಹಿಳೆಯರಿಗೆ ಉತ್ಸವ್ ಅವರು ಅಸಭ್ಯ ಸಂದೇಶ ಕಳಿಸಿದ್ದಾರೆ ಎಂದು ಗುರುವಾರ ಆರೋಪವೆದ್ದಿತ್ತು.ಉತ್ಸವ್ ಕಳುಹಿಸಿದ ಅಸಭ್ಯ ಸಂದೇಶಗಳನ್ನು ಮಹಿಳೆಯರು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದು, ಈತ ತನ್ನ ವರ್ತನೆ ಬಗ್ಗೆ ಕ್ಷಮೆ ಯಾಚಿಸಿದ್ದನು.

ಉತ್ಸವ್ ಅವರ ಪ್ರಕರಣ ಬಗ್ಗೆ ಗೊತ್ತಿದ್ದ ತನ್ಮಯ್, ಈ ಪ್ರಕರಣ ಗೊತ್ತಿದ್ದರೂ ತಾನು ಸುಮ್ಮನೆ ಇದ್ದೆ. ಆ ಹೊತ್ತಿನಲ್ಲೇ ನಾನು ಆತನೊಂದಿಗೆ ಸಂಬಂಧ ಕಡಿದುಕೊಳ್ಳಬೇಕಾಗಿತ್ತು, ಆದರೆ ನಾನದನ್ನು ಮಾಡಿಲ್ಲ. ಅದು ನನ್ನ ತಪ್ಪು, ನಾನು ಕ್ಷಮೆಯಾಚಿಸುತ್ತಿದ್ದೇನೆ. ನಾನು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.