ಸಾಂದರ್ಭಿಕ ಚಿತ್ರ
ಜಮ್ಮು: ದೆಹಲಿಯಿಂದ ಜಮ್ಮು ಮೂಲಕ ಶ್ರೀನಗರಕ್ಕೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಧ್ಯಾಹ್ನ ಇಲ್ಲಿ ಲ್ಯಾಂಡ್ ಆಗದೆ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಲ್ಯಾಂಡ್ ಆಗದೆ ದೆಹಲಿಗೆ ಹಿಂದಿರುಗಲು ಕಾರಣವೇನೆಂದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಐಎಕ್ಸ್-2564 ವಿಮಾನವು ಶ್ರೀನಗರಕ್ಕೆ ಹೊರಟಿತ್ತು. ಮಧ್ಯಾಹ್ನದ ಸುಮಾರಿಗೆ ಜಮ್ಮುವಿನಲ್ಲಿ ನಿಲುಗಡೆ ಇತ್ತು. ಆದರೆ, ಅದು ದೆಹಲಿಗೆ ಹಿಂದಿರುಗಿದೆ. ಹಿಂದಿರುಗುವುದಕ್ಕೂ ಮುನ್ನ ವಿಮಾನ ಕೆಲ ಕಾಲ ಜಮ್ಮು ವಿಮಾನ ನಿಲ್ದಾಣದ ಮೇಲೆ ಹಾರಾಟ ನಡೆಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹವಾಮಾನದಲ್ಲಿ ಯಾವುದೇ ತೊಂದರೆ ಇರಲಿಲ್ಲ. ರನ್‌ವೇ ಸ್ಪಷ್ಟವಾಗಿತ್ತು, ಆದರೆ, ಪೈಲಟ್‌ಗೆ ಸೂಕ್ತವಾದ ಲ್ಯಾಂಡಿಂಗ್ ಪ್ರದೇಶವನ್ನು ಕಂಡುಕೊಳ್ಳಲಾಗಲಿಲ್ಲ ಎಂಬಂತೆ ತೋರುತ್ತಿದೆ ಎಂದು ಅವರು ಹೇಳಿದ್ದಾರೆ.
ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ವಿಮಾನ ಪತನವಾಗಿ 271ಕ್ಕೂ ಅಧಿಕ ಮಂದಿ ಮೃತಪಟ್ಟ ಬಳಿಕ ಏರ್ ಇಂಡಿಯಾದ ಹಲವು ವಿಮಾನಗಳಲ್ಲಿ ತಾಂತ್ರಿಕ ದೋಷದ ಬಗ್ಗೆ ವರದಿಯಾಗುತ್ತಿದೆ. ತಾಂತ್ರಿಕ ಪರಿಶೀಲನೆ ದೃಷ್ಟಿಯಿಂದ ಕಾರ್ಯಾಚರಿಸುತ್ತಿರುವ ವಿಮಾನಗಳ ಸಂಖ್ಯೆಯನ್ನೂ ಏರ್ ಇಂಡಿಯಾ ಕಡಿತಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.