ADVERTISEMENT

ಅಜಯ್ ಮಾಕೆನ್‌ ರಾಜೀನಾಮೆ

ಪಿಟಿಐ
Published 4 ಜನವರಿ 2019, 18:11 IST
Last Updated 4 ಜನವರಿ 2019, 18:11 IST
ಅಜಯ್‌ ಮಾಕೆನ್‌
ಅಜಯ್‌ ಮಾಕೆನ್‌   

ನವದೆಹಲಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ದೆಹಲಿ ಘಟಕದ ಅಧ್ಯಕ್ಷ ಅಜಯ್ ಮಾಕೆನ್‌ ತಮ್ಮ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಕೆನ್‌ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರನ್ನು ಪಕ್ಷದ ದೆಹಲಿ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ. ಹಿರಿಯ ಮುಖಂಡರಾದ ಯೋಗಾನಂದ ಶಾಸ್ತ್ರಿ, ರಾಜ್‌ಕುಮಾರ್‌ ಚೌಹಾಣ್‌, ಹರೂನ್‌ ಯೂಸೂಫ್‌ ಹಾಗೂ ಚತಾರ್‌ ಸಿಂಗ್‌ ಅವರ ಹೆಸರುಗಳು ಸಹ ಈ ಹುದ್ದೆಗೆ ಕೇಳಿ ಬರುತ್ತಿವೆ.

ಮಾಕೆನ್‌ ಅವರು ತಮ್ಮ ರಾಜೀನಾಮೆಗೆ ಅನಾರೋಗ್ಯದ ಕಾರಣ ನೀಡಿದ್ದಾರೆ. ಆದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಆಪ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಮಾಕೆನ್‌ ಅವರಿಗೆ ಈ ನಡೆ ಇಷ್ಟ ಇಲ್ಲ. ಹೀಗಾಗಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.