ADVERTISEMENT

ಪ್ರಿಯಾ ರಮಣಿ ಆರೋಪ ಸತ್ಯಕ್ಕೆ ದೂರ: ಎಂ.ಜೆ.ಅಕ್ಬರ್‌

ಪಿಟಿಐ
Published 20 ಮೇ 2019, 16:30 IST
Last Updated 20 ಮೇ 2019, 16:30 IST
ಅಕ್ಬರ್
ಅಕ್ಬರ್   

ನವದೆಹಲಿ: ಪತ್ರಕರ್ತೆ ಪ್ರಿಯಾ ರಮಣಿಯನ್ನು ಹೋಟೆಲ್‌ನಲ್ಲಿಸಂದರ್ಶನಕ್ಕಾಗಿ ಭೇಟಿ ಮಾಡಿರುವ ಆರೋಪವನ್ನು ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ತಿರಸ್ಕರಿಸಿದ್ದಾರೆ.

1994ರಲ್ಲಿ ಎಂ.ಜೆ. ಅಕ್ಬರ್‌ ಪತ್ರಿಕೆ ಸಂಪಾದಕರಾಗಿದ್ದ ಸಂದರ್ಭದಲ್ಲಿ ಸಂದರ್ಶನ ನಡೆಸುವ ನೆಪದಲ್ಲಿ ಹೋಟೆಲ್‌ ಕೊಠಡಿಗೆ ಕರೆದು ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಪ್ರಿಯಾ ರಮಣಿ ಆರೋಪಿಸಿದ್ದರು.

‘ನಾನು ಪ್ರಿಯಾ ರಮಣಿ ಅವರನ್ನು ಹೋಟೆಲ್‌ಗೆ ಕೊಠಡಿಗೆ ಕರೆದಿದ್ದೆ. ಆದರೆ, ಆಕೆ ಹಿಂಜರಿದಳು ಎಂಬುದೆಲ್ಲ ಸುಳ್ಳು. ಪದವಿ ಬಳಿಕ ಅದು ಆಕೆಯ ಮೊದಲ ಸಂದರ್ಶನವಾಗಿತ್ತು ಎಂಬುದರ ಬಗ್ಗೆಯೂ ನನಗೆ ತಿಳಿದಿಲ್ಲ’ ಎಂದಿದ್ದಾರೆ.

ADVERTISEMENT

‘ಈ ಅವಧಿಯಲ್ಲಿ ಪ್ರಿಯಾ ರಮಣಿಗೆ ಏಷಿಯನ್‌ ಏಜ್‌ ಪತ್ರಿಕೆಯ ದೆಹಲಿಯ ಕಚೇರಿಯಲ್ಲಿ ಉದ್ಯೋಗ ನೀಡಲಾಯಿತು ಎಂಬುದರ ಬಗ್ಗೆ ನನಗೆ ಖಾತ್ರಿಯಿಲ್ಲ.ನನ್ನ ತಿಳಿವಳಿಕೆ ಪ್ರಕಾರ ಮುಂಬೈ ಕಚೇರಿಯಲ್ಲಿ ಕೆಲಸದಲ್ಲಿದ್ದರು’ ಎಂದಿದ್ದಾರೆ.

ಇದೇ ವೇಳೆ, ಇತರ ಪತ್ರಕರ್ತೆಯರು ಅಕ್ಬರ್‌ ವಿರುದ್ಧ ಮಾಡಿದ ಆರೋಪದ ಕುರಿತು ಪಾಟಿ ಸವಾಲು ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.