ADVERTISEMENT

ವಾರಾಣಸಿಯಲ್ಲಿ ಐಎಸ್‌ ಉಗ್ರನ ಸೆರೆ: ಭಾರತ–ನೇಪಾಳ ಗಡಿಯಲ್ಲಿ ಕಟ್ಟೆಚ್ಚರ

ಪಿಟಿಐ
Published 21 ಅಕ್ಟೋಬರ್ 2022, 12:04 IST
Last Updated 21 ಅಕ್ಟೋಬರ್ 2022, 12:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಹಾರಾಜಗಂಜ್ (ಉತ್ತರ ಪ್ರದೇಶ): ಐಎಸ್‌ ಸಂಘಟನೆ ಜತೆ ಗುರುತಿಸಿಕೊಂಡಿರುವ ವ್ಯಕ್ತಿಯನ್ನು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಬಂಧಿಸಿದ ಬೆನ್ನಲ್ಲೇ ಭಾರತ–ನೇಪಾಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಸಹಸ್ರ ಸೀಮಾ ಬಲ (ಎಸ್‌ಎಸ್‌ಬಿ) ಸಹಾಯಕ ಕಮಾಂಡೆಂಟ್ ಲಲಿತ್‌ ಮೋಹನ್ ದೋವಲ್‌ ಅವರು ಶುಕ್ರವಾರ, ಜಿಲ್ಲೆಯ ಸೊನೌಲಿ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಸಾಗುವ ಪ್ರತಿ ನಾಗರಿಕರನ್ನು ಪರಿಶೀಲಿಸಲಾಗುತ್ತಿದೆ. ತೀವ್ರ ತನಿಖೆ ಮತ್ತು ತಪಾಸಣೆ ಬಳಿಕವಷ್ಟೇ ಸೊನೌಲಿ ಗಡಿಯ ಮೂಲಕ ಭಾರತ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಎಸ್‌ಎಸ್‌ಬಿ ಸಿಬ್ಬಂದಿ ಭಗ್ವಾನ್‌ಪುರ, ಶ್ಯಾಮ್‌ಕೋಟ್‌, ಚಂಡಿಥಾನ್‌ ಸೇರಿ ಹಲವು ಗ್ರಾಮಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.