ADVERTISEMENT

ವಾಗ್ವಾದಕ್ಕೆ ವೇದಿಕೆಯಾದ ಚುನಾವಣೆ

ಜೆಎನ್‌ಯು ವಿದ್ಯಾರ್ಥಿ ಸಂಘಕ್ಕೆ ಬಿರುಸಿನ ಪೈಪೋಟಿ

ಪಿಟಿಐ
Published 5 ಸೆಪ್ಟೆಂಬರ್ 2019, 20:00 IST
Last Updated 5 ಸೆಪ್ಟೆಂಬರ್ 2019, 20:00 IST
   

ನವದೆಹಲಿ (ಪಿಟಿಐ): ರಾಜಕಾರಣ ಮತ್ತು ತೀವ್ರ ಹಣಾಹಣಿಯ ಕಾರಣಗಳಿಗಾಗಿ ಇಲ್ಲಿನ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘದ ಚುನಾವಣೆ ದೇಶವ್ಯಾಪಿ ಗಮನಸೆಳೆಯಲಿದೆ.

ಸೆ. 6ರಂದು (ಶುಕ್ರವಾರ) ವಿದ್ಯಾರ್ಥಿ ಸಂಘದ ಚುನಾವಣೆ ನಡೆಯಲಿದ್ದು, ಸೆ.8ರಂದು ಫಲಿತಾಂಶ ಹೊರಬೀಳಲಿದೆ. ಅಮೆಜಾನ್‌ ಕಾಡಿನಲ್ಲಿ ಆವರಿಸಿದ್ದ ಕಾಳ್ಗಿಚ್ಚು, ಗುಂಪು ದಾಳಿ, ಸಂವಿಧಾನದ ವಿಧಿ 370 ರದ್ದು, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕೂಡಾ ಚುನಾವಣೆಯ ವಿಷಯಗಳು. ರಾಷ್ಟ್ರಮಟ್ಟದ ವಿದ್ಯಮಾನಗಳೇ ಅಭ್ಯರ್ಥಿಗಳ ಭಾಷಣಕ್ಕೆ ಪ್ರಮುಖ ವಿಷಯಗಳಾಗಿದ್ದವು.

ಸ್ಥಳೀಯ ಬಿಎಪಿಎಸ್‌ಎ (ಬಿರ್ಸಾ ಅಂಬೇಡ್ಕರ್‌ ಫುಲೆ ವಿದ್ಯಾರ್ಥಿ ಸಂಘಟನೆ), ಆರ್‌ಜೆಡಿ ಪಕ್ಷದ ವಿದ್ಯಾರ್ಥಿ ಘಟಕ, ಕಾಂಗ್ರೆಸ್‌ ಬೆಂಬಲಿತ ಎನ್‌ಎಸ್‌ಯುಐ, ಬಿಜೆಪಿ ಬೆಂಬಲಿತ ಎಬಿವಿಪಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ADVERTISEMENT

ಆರ್‌ಜೆಡಿ ಪಕ್ಷದ ವಿದ್ಯಾರ್ಥಿ ಘಟಕ ‘ಛಾತ್ರಾ ಆರ್‌ಜೆಡಿ’ ಅಭ್ಯರ್ಥಿ ಪ್ರಿಯಾಂಕಾ ಭಾರ್ತಿ ಮತ್ತು ಬಿಎಪಿಎಸ್‌ಎ ಅಭ್ಯರ್ಥಿ ಜಿತೇಂದ್ರ ಸುನಾ ಗಮನಸೆಳೆದರು. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧದ ಟೀಕೆಗೆ ವಿರೋಧ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.