ADVERTISEMENT

ಅಮಿತ್ ಶಾ ಸಭೆಗೂ ಮುನ್ನ ಗೋಲಿ ಮಾರೊ ಘೋಷಣೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 7:14 IST
Last Updated 2 ಮಾರ್ಚ್ 2020, 7:14 IST
ಕೋಲ್ಕತ ಸಭೆಯಲ್ಲಿ ಅಮಿತ್ ಶಾ ಮತ್ತು ಪಶ್ಚಿಮ ಬಂಗಾಳ ಬಿಜೆಪಿ ಮುಖಂಡರು
ಕೋಲ್ಕತ ಸಭೆಯಲ್ಲಿ ಅಮಿತ್ ಶಾ ಮತ್ತು ಪಶ್ಚಿಮ ಬಂಗಾಳ ಬಿಜೆಪಿ ಮುಖಂಡರು   

ಕೋಲ್ಕತ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಭೆಗೆ ತೆರಳುತ್ತಿದ್ದ ವೇಳೆ ಗೋಲಿ ಮಾರೊ (ಗುಂಡಿಕ್ಕಿ) ಘೋಷಣೆ ಕೂಗಿದ ಆರೋಪದಡಿ ಮೂವರನ್ನು ಬಂಧಿಸಲಾಗಿದೆ.

ಸಭೆ ನಡೆಯುತ್ತಿದ್ದ ಶಾಹಿದ್‌ ಮಿನಾರ್‌ ಮೈದಾನಕ್ಕೆ ತೆರಳುತ್ತಿದ್ದ ಗುಂಪು ಮೈದಾ ಮಾರ್ಕೆಟ್‌ ಸಮೀಪ ಗೋಲಿ ಮಾರೊ ಘೋಷಣೆ ಕೂಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಸುಭಾಸ್‌ ಸರ್ಕಾರ್‌ ಅವರು, ‘ಗೋಲಿ ಮಾರೊ ಘೋಷಣೆಯನ್ನು ನಮ್ಮ ಕಾರ್ಯಕರ್ತರು ಕೂಗಿಲ್ಲ. ಬಿಜೆಪಿಗೆ ಕೆಟ್ಟ ಹೆಸರು ತರಲು ಟಿಎಂಸಿ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ’ ಎಂದು ಹೇಳಿದ್ದರು.

ADVERTISEMENT

ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿತ್ತು.

ದ್ವೇಷ ಬಿತ್ತುವ ಘೋಷಣೆ ಕೂಗಿದವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಡ ಪಕ್ಷಗಳು ಎಚ್ಚರಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.