ADVERTISEMENT

ಕೆಲವೇ ಜಾತಿಗಳಿಗಾಗಿ ಕೆಲಸ ಮಾಡಿದ್ದ ಎಸ್‌ಪಿ, ಬಿಎಸ್‌ಪಿ: ಅಮಿತ್ ಶಾ ವಾಗ್ದಾಳಿ

ಪಿಟಿಐ
Published 17 ಡಿಸೆಂಬರ್ 2021, 14:40 IST
Last Updated 17 ಡಿಸೆಂಬರ್ 2021, 14:40 IST
ಅಮಿತ್ ಶಾ -ಪಿಟಿಐ ಚಿತ್ರ
ಅಮಿತ್ ಶಾ -ಪಿಟಿಐ ಚಿತ್ರ   

ಲಖನೌ:ಉತ್ತರ ಪ್ರದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಪ್ರತಿಪಕ್ಷಗಳು ಕೆಲವೇ ಜಾತಿಗಳಿಗಾಗಿ ಕೆಲಸ ಮಾಡಿದ್ದವು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ.

‘ನಿಷಾದ್ ಪಕ್ಷ’ದ ಜತೆಗೂಡಿ ಬಿಜೆಪಿ ಆಯೋಜಿಸಿದ್ದ ‘ಸರ್ಕಾರ್ ಬನಾವೊ, ಅಧಿಕಾರ್ ಪಾವೊ’ ರ್‍ಯಾಲಿ ಉದ್ದೇಶಿಸಿ ಅವರು ಮಾತನಾಡಿದ್ದಾರೆ.

‘ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಿದ್ದಾಗಲೆಲ್ಲಾ ಅವರ ಜಾತಿಗಾಗಿ ಮಾತ್ರ ಕೆಲಸ ಮಾಡಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ಎಲ್ಲ ಹಿಂದುಳಿದ ಜಾತಿ ಮತ್ತು ಬಡವರಿಗಾಗಿ ಕೆಲಸ ಮಾಡಿದ್ದಾರೆ’ ಎಂದು ಶಾ ಹೇಳಿದ್ದಾರೆ.

ADVERTISEMENT

ಯೋಗಿ ಆದಿತ್ಯನಾಥ್ ಅವರ ಆಳ್ವಿಕೆಯಲ್ಲಿ ಉತ್ತರ ಪ್ರದೇಶದಲ್ಲಿ ಅಪರಾಧ ಕೃತ್ಯಗಳು ಮತ್ತು ಮಾಫಿಯಾ ಚಟುವಟಿಕೆಗಳನ್ನು ಬೇರುಸಹಿತ ಕಿತ್ತುಹಾಕಲಾಗಿದೆ. ಹಿಂದಿನ ಸರ್ಕಾರಗಳಿದ್ದಾಗ ರಾಜ್ಯದಲ್ಲಿ ಮಾಫಿಯಾ ಆಡಳಿತವಿತ್ತು. ಬಡವರ ಅಭಿವೃದ್ಧಿ ಆಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.