ADVERTISEMENT

ಕಾಶ್ಮೀರದಲ್ಲಿ ಕಲ್ಲು ತೂರುವವರು ಉಗ್ರ ಸಂಘಟನೆ ಕಾರ್ಯಕರ್ತರು: ಬಿಪಿನ್‌ ರಾವತ್‌

ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ ಸೇನಾ ಮುಖ್ಯಸ್ಥ

ಪಿಟಿಐ
Published 27 ಅಕ್ಟೋಬರ್ 2018, 17:52 IST
Last Updated 27 ಅಕ್ಟೋಬರ್ 2018, 17:52 IST
ಜನರಲ್ ಬಿಪಿನ್‌ ರಾವತ್‌
ಜನರಲ್ ಬಿಪಿನ್‌ ರಾವತ್‌   

ನವದೆಹಲಿ:ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನೆ ನೆಪದಲ್ಲಿ ಕಲ್ಲು ತೂರಾಟ ನಡೆಸುವವರು ಉಗ್ರಸಂಘಟನೆಗಳ ಕಾರ್ಯಕರ್ತರಾಗಿದ್ದಾರೆ. ಅವರ ವಿರುದ್ಧ ಸೇನೆಯು ನಿಸ್ಸಂದೇಹವಾಗಿ ಕ್ರಮ ಕೈಗೊಳ್ಳಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಶನಿವಾರ ಹೇಳಿದ್ದಾರೆ.

ಕಾಶ್ಮೀರದಲ್ಲಿ ಶುಕ್ರವಾರ ನಡೆದ ಕಲ್ಲು ತೂರಾಟದಲ್ಲಿ ಯೋಧನೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಅವರು ಈ ಪ್ರತಿಕ್ರಿಯೆ ನೀಡಿದ್ದು, ‘ಗಡಿ ಉಲ್ಲಂಘನೆ ಭಯೋತ್ಪಾದನೆಯನ್ನು ಪಾಕಿಸ್ತಾನ್ ಬೆಂಬಲಿಸುತ್ತಿದೆ’ ಎಂದು ಹೇಳಿದ್ದಾರೆ. ಅಲ್ಲದೆ, ಪಾಕಿಸ್ತಾನ ತನ್ನ ಚಾಳಿ ಮುಂದುವರಿಸಿದರೆ ‘ಬೇರೆ ಕ್ರಮ’ಗಳನ್ನೂ ಕೈಗೊಳ್ಳಬೇಕಾಗುತ್ತದೆ ಎಂದೂ ರಾವತ್‌ ಎಚ್ಚರಿಸಿದ್ದಾರೆ. ಆದರೆ, ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಅವರು ಹೇಳಲಿಲ್ಲ.

ಅನಂತನಾಗ್‌ ಜಿಲ್ಲೆಯಲ್ಲಿ ಯುವಕರ ಗುಂಪೊಂದು ನಡೆಸಿದ ಕಲ್ಲು ತೂರಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧ ರಾಜೇಂದ್ರ ಸಿಂಗ್‌ (22) ಶುಕ್ರವಾರ ಸಾವಿಗೀಡಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.