ADVERTISEMENT

ಗುಟ್ಕಾ ಹಗರಣ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2018, 19:54 IST
Last Updated 6 ಸೆಪ್ಟೆಂಬರ್ 2018, 19:54 IST

ಚೆನ್ನೈ: ತಮಿಳುನಾಡಿನ ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್, ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಟಿ.ಕೆ. ರಾಜೇಂದ್ರನ್ ಮತ್ತು ಚೆನ್ನೈ ಪೊಲೀಸ್ ಆಯುಕ್ತ ಎಸ್. ಜಾರ್ಜ್ ಭಾಗಿಯಾಗಿದ್ದಾರೆ ಎನ್ನಲಾದ ಬಹುಕೋಟಿ ಗುಟ್ಕಾ ಹಗರಣಕ್ಕೆ ಸಂಬಂಧಿದಂತೆ ಸಿಬಿಐ ಅಧಿಕಾರಿಗಳು ಐವರನ್ನು ಬಂಧಿಸಿದ್ದಾರೆ.

ಎಂಡಿಎಂ ಗುಟ್ಕಾ ಕಂಪನಿ ಮಾಲೀಕರಾದ ಎ.ವಿ. ಮಾಧವರಾವ್, ಉಮಾಶಂಕರ ಗುಪ್ತಾ ಮತ್ತು ಶ್ರೀನಿವಾಸರಾವ್, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿ ಪಿ. ಸೆಂತಿಲ್ ಮುರುಗನ್ ಮತ್ತು ಕೇಂದ್ರ ಅಬಕಾರಿ ಇಲಾಖೆ ಅಧೀಕ್ಷಕ ಎನ್.ಕೆ. ಪಾಂಡಿಯನ್ ಬಂಧಿತರು. ಈ ಪ್ರಕರಣದಲ್ಲಿ ಮೊದಲ ಬಂಧನ ಇದಾಗಿದ್ದು, ಎಲ್ಲರನ್ನು ಸಿಬಿಐ ನ್ಯಾಯಾಲಯ ಇದೇ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

2016ರಲ್ಲಿ ಮಾಧವ ರಾವ್ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸಿದ್ದಾಗ ‘ನಿಷೇಧಿತ ಗುಟ್ಕಾ ಮಾರಾಟಕ್ಕೆ ಅವಕಾಶ ಕೊಟ್ಟಿದ್ದಕ್ಕಾಗಿ ವಿಜಯಭಾಸ್ಕರ್, ರಾಜೇಂದ್ರನ್ ಮತ್ತು ಜಾರ್ಜ್‌ಗೆ ₹ 40 ಕೋಟಿ ಲಂಚ ನೀಡಲಾಗಿದೆ’ ಎಂದು ಬರೆದಿರುವ ಡೈರಿ ಸಿಕ್ಕಿತ್ತು. ಈ ಪ್ರಕರಣದ ಪ್ರಮುಖ ಸಾಕ್ಷ್ಯ ಇದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.