ರಾಮೇಶ್ವರ: ಶ್ರೀ ಶ್ರೀ ರವಿಶಂಕರ್ ಅವರ ಸಾನ್ನಿಧ್ಯದಲ್ಲಿ ಸೋಮನಾಥ ಜ್ಯೋತಿರ್ಲಿಂಗ ಮಹಾರುದ್ರ ಪೂಜೆಯೊಂದಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆಗಳಿಗೆ ಚಾಲನೆ ದೊರೆಯಿತು.
ಸಮಾರಂಭದಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರು. ದೇಶದ 12 ಜ್ಯೋತಿರ್ಲಿಂಗ ಕ್ಷೇತ್ರಗಳು, ಅಮರನಾಥ ಮತ್ತು ಪಶುಪತಿನಾಥ ಮಂದಿರಗಳಿಂದ ಆಗಮಿಸಿದ ಪಂಡಿತರು ಈ ಮಹಾ ವಿಧಿಗೆ ಆಶೀರ್ವಾದ ನೀಡಿದರು.
ಪ್ರತಿಯೊಂದು ಕ್ಷೇತ್ರದಿಂದ ತರಿಸಲಾದ ಪವಿತ್ರ ತೀರ್ಥಗಳನ್ನು ಪೂಜೆಯಲ್ಲಿ ಅರ್ಪಿಸಲಾಯಿತು. ತಮಿಳುನಾಡಿನ ಪಂಚಭೂತ ಕ್ಷೇತ್ರಗಳಿಂದ—ಭೂಮಿ, ಜಲ, ಅಗ್ನಿ, ವಾಯು, ಆಕಾಶ ಎಂಬ ಪ್ರಕೃತಿಯ ಐದು ಮೂಲತತ್ತ್ವಗಳನ್ನು ಪ್ರತಿನಿಧಿಸುವ ಪವಿತ್ರ ಜಲಗಳನ್ನೂ ವಿಶೇಷ ರುದ್ರಾಭಿಷೇಕದಲ್ಲಿ ಅರ್ಪಿಸಲಾಯಿತು.
ಗುರುದೇವರು ಇಲ್ಲಿ ಸೃಷ್ಟಿಸಿದ ಆತ್ಮಿಕ ಮಹಿಮೆ ಅಸಾಧಾರಣ. ಎಲ್ಲ 12 ಜ್ಯೋತಿರ್ಲಿಂಗಗಳು ಒಂದೇ ಸ್ಥಳದಲ್ಲಿ ಸಾನ್ನಿಧ್ಯ ಪಡೆದಿರುವ ಅನುಭವವಾಗುತ್ತಿದೆ ಎಂದು ಕಾಶಿ ವಿಶ್ವನಾಥ ಕ್ಷೇತ್ರದ ಪಂಡಿತ ರಾಮಾನಂದ ದುಬೆ ಹೇಳಿದರು.
ಏಳನೇ ಶತಮಾನದ ಶೈವ ನಾಯನಾರ್ ಸಂತ ತಿರುಜ್ಞಾನಸಂಬಂದರ್ ರಚಿಸಿದ ಪ್ರಸಿದ್ಧ ‘ಕೋಳರು ಪಥಿಗಂ’ನ್ನು ಜಗತ್ತಿನ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಸುಮಾರು ಎರಡು ಕೋಟಿ ಭಕ್ತರು ಒಂದೇ ಸಮಯದಲ್ಲಿ ಸಮೂಹವಾಗಿ ಪಠಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.