ADVERTISEMENT

‘ಅಯೋಧ್ಯೆ ವಿವಾದಿತ ಸ್ಥಳದಲ್ಲಿ ದೇವರ ಚಿತ್ರ’

ಹಿಂದೂಗಳಿಗೆ ಸೇರಿರುವ ಭೂಮಿ; ಸುಪ್ರೀಂ ಎದುರು ರಾಮಲಲ್ಲಾ ಪ್ರತಿಪಾದನೆ

ಪಿಟಿಐ
Published 16 ಆಗಸ್ಟ್ 2019, 20:30 IST
Last Updated 16 ಆಗಸ್ಟ್ 2019, 20:30 IST
   

ನವದೆಹಲಿ :‘ಅಯೋಧ್ಯೆ ವಿವಾದಿತ ಸ್ಥಳದಲ್ಲಿ ದೊರೆತಿರುವ ಸ್ತಂಭಗಳಲ್ಲಿ ವಿವಿಧ ದೇವತೆಗಳ ಚಿತ್ರಗಳಿವೆ’ ಎಂದು ರಾಮಲಲ್ಲಾ ವಿರಾಜಮಾನ್‌ ಪರ ವಕೀಲರು ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದರು.

ವಿವಾದಿತ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಪ್ರಕರಣದ ವಿಚಾರಣೆಯ ಏಳನೇ ದಿನಹಿರಿಯ ವಕೀಲ ಸಿ.ಎಸ್‌.ವೈದ್ಯನಾಥನ್ ಅವರು, ಈ ಕುರಿತ ಮಾಹಿತಿ ನೀಡಿದರು.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದ ಎದುರು ವಾದ ಮಂಡಿಸಿ, ದೇವತೆಗಳ ಚಿತ್ರಗಳಿದ್ದ ಆಲ್ಬಮ್‌ ಅನ್ನೂ ಹಸ್ತಾಂತರಿಸಿದರು. ಮಸೀದಿಗಳಲ್ಲಿ ಇಂಥದು ಕಂಡುಬರುವುದಿಲ್ಲ ಎಂದು
ಪ್ರತಿಪಾದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.