
ಪಿಟಿಐಬಾಬಾ ಆಢಾವ್
ಪುಣೆ: ಮಹಾರಾಷ್ಟ್ರದ ಸಾಮಾಜಿಕ ಹೋರಾಟಗಾರ ಬಾಬಾ ಆಢಾವ್ (95) ಅವರು ದೀರ್ಘ ಕಾಲಿಕ ಆರೋಗ್ಯದ ಸಮಸ್ಯೆಯಿಂದಾಗಿ ಸೋಮವಾರ ನಿಧನರಾದರು.
ಮಹಾರಾಷ್ಟ್ರದ ಸಾಮಾಜಿಕ ಹಾಗೂ ಕಾರ್ಮಿಕ ಚಳವಳಿಗಳ ಮುಖ್ಯ ಸ್ತಂಭ ಎಂದೇ ಹೆಸರಾಗಿದ್ದ ಬಾಬಾ ಆಢಾವ್, ‘ಹಮಾಲ್ ಪಂಚಾಯತ್’ ಎಂಬ ಸಂಘಟನೆ ಕಟ್ಟಿದ್ದರು. ಪುಣೆ ಹಾಗೂ ಮತ್ತಿತರ ಭಾಗಗಳಲ್ಲಿ ಕೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಅವರು ಹೋರಾಟಗಳನ್ನು ರೂಪಿಸಿದ್ದರು. ಅವರಿಗೆ ಇಬ್ಬರು ಪುತ್ರರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.