ನವದೆಹಲಿ: ಭಾರತದಿಂದ ಗಡಿಪಾರಾಗಿ ತಿಂಗಳೊಳಗೆ ಅಕ್ರಮವಾಗಿ ಭಾರತದೊಳಕ್ಕೆ ನುಸುಳಿ ಬಂದಿರುವ ಆರೋಪಡಿ ಲಿಂಗತ್ವ ಅಲ್ಪಸಂಖ್ಯಾತೆಯೂ ಸೇರಿದಂತೆ ಆರು ಮಂದಿ ಬಾಂಗ್ಲಾದೇಶಿಯರನ್ನು ಪೊಲೀಸರು ಬಂಧಿಸಿದ್ದಾರೆ.
300 ಮಂದಿ ಅಕ್ರಮ ವಲಸಿಗರನ್ನು ಹಿಂಡನ್ ವಾಯುನೆಲೆಯಿಂದ ವಿಮಾನದ ಮೂಲಕ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಗಿತ್ತು. ಇವರೊಂದಿಗಿದ್ದ ಲಿಂಗತ್ವ ಅಲ್ಪಸಂಖ್ಯಾತೆ ಸುಹಾನ್ ಖಾನ್ (30) ಸೇರಿದಂತೆ ಆರು ಮಂದಿ ಪುನಃ ವಾಯವ್ಯ ದೆಹಲಿಯಲ್ಲಿ ಕಾಣಿಸಿಕೊಂಡಿದ್ದರು. ಜೂನ್ 30ರಂದು ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸುಹಾನ್ ಖಾನ್ ಅವರನ್ನು ಮೇ 15ರಂದು ವಾಯವ್ಯ ದೆಹಲಿಯಲ್ಲಿ ಬಂಧಿಸಿ ವಿದೇಶಿಗರ ಪ್ರಾದೇಶಿಕ ನೋಂದಣಾಧಿಕಾರಿ ಕಚೇರಿಗೆ ಒಪ್ಪಿಸಲಾಗಿತ್ತು. ಜೂನ್ ಮೊದಲ ವಾರದಲ್ಲಿ ಹಿಂಡನ್ ವಾಯುಲೆಯಿಂದ ಅಗರ್ತಲಾಗೆ ವಿಮಾನದ ಮೂಲಕ ಕಳುಹಿಸಲಾಗಿತ್ತು. ಅಲ್ಲಿಂದ ಬಾಂಗ್ಲಾದೇಶಕ್ಕೆ ಕಳುಹಿಸಬೇಕಿತ್ತು. ಆದರೆ, ಸುಹಾನ್ ಖಾನ್ ಸೇರಿದಂತೆ ಆರು ಮಂದಿ ಅಗರ್ತಲಾದಿಂದ ರೈಲಿನಲ್ಲಿ ದಹಲಿಗೆ ಮರಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.