ADVERTISEMENT

ಬೇಕಲ ಕೋಟೆ: ಬುರುಜು ಕುಸಿತ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 20:15 IST
Last Updated 12 ಆಗಸ್ಟ್ 2019, 20:15 IST
   

ಕಾಸರಗೋಡು: ನಿರಂತರವಾಗಿ ಸುರಿದ ಮಳೆಗೆ ಕಾಸರಗೋಡು ಜಿಲ್ಲೆಯ ಪ್ರವಾಸಿ ತಾಣ ಬೇಕಲ ಕೋಟೆಯ ಬುರುಜಿನ ಪಾರ್ಶ್ವ ಗೋಡೆ ಜರಿದು ಬಿದ್ದಿದೆ. ಪ್ರವಾಸಿಗರಿಗೆ ಕೋಟೆ ವೀಕ್ಷಣೆಗೆ ಪ್ರವೇಶ ನಿಷೇಧಿಸಲಾಗಿದೆ.

ಕೋಟೆಯ ಪ್ರವೇಶದ್ವಾರದ ಮೇಲೆ ಇರುವ ಕೋಟೆಯ ಬುರುಜಿನ ಗೋಡೆ ಕುಸಿದಿದ್ದು, ಇನ್ನಷ್ಟು ಮಳೆ ಸುರಿದರೆ ಬುರುಜು ಸಂಪೂರ್ಣ ನೆಲಸಮವಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸುಮಾರು ಮೂರೂವರೆ ಶತಮಾನಗಳ ಹಿಂದೆ ಕಾಸರಗೋಡನ್ನು ಆಳುತ್ತಿದ್ದ ಇಕ್ಕೇರಿ ವೆಂಕಟಪ್ಪ ನಾಯಕ ಕಟ್ಟಿದ ಈ ಕೋಟೆ ಅಂದಿನ ಆಡಳಿತ ಕೇಂದ್ರ ಹಾಗೂ ಪ್ರಧಾನ ರಕ್ಷಣಾಗಾರವೂ ಆಗಿತ್ತು. ಈಗ ಪ್ರಾಚ್ಯವಸ್ತು ಇಲಾಖೆ (ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ)ದ ಅಧೀನದಲ್ಲಿದೆ. ಗೋಡೆ ಕುಸಿರುವುದರಿಂದ ಸಂದರ್ಶಕರಿಗೆ ಈ ಬುರುಜಿಗೆ ಹೋಗುವುದನ್ನು ನಿಷೇಧಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.