ADVERTISEMENT

ಬೇನಾಮಿ ಕಾಯ್ದೆ ತಿದ್ದುಪಡಿ ಪೂರ್ವಾನ್ವಯ ಇಲ್ಲ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 19:49 IST
Last Updated 23 ಆಗಸ್ಟ್ 2022, 19:49 IST
   

ನವದೆಹಲಿ: ಬೇನಾಮಿ ವಹಿವಾಟುಗಳ ನಿಷೇಧ ಕಾಯ್ದೆ–
1988ರ 3(2)ನೇ ಸೆಕ್ಷನ್‌ ಅಸಾಂವಿಧಾನಿಕ. ಜತೆಗೆ ಈ ಕಾಯ್ದೆಗೆ 2016ರಲ್ಲಿ ತರಲಾಗಿ
ರುವ ತಿದ್ದುಪಡಿಗಳನ್ನು ಪೂರ್ವಾನ್ವಯ ಮಾಡಲು ಸಾಧ್ಯ
ವಿಲ್ಲ ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ.

ಈ ಕಾಯ್ದೆಗೆ 2016ರಲ್ಲಿ ತರಲಾಗಿದ್ದ ತಿದ್ದುಪಡಿಗಳನ್ನು ಪೂರ್ವಾನ್ವಯ ಮಾಡುವಂತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

‘1988ರ ಕಾಯ್ದೆಯ 3(2)ನೇ ಸೆಕ್ಷನ್‌ ಅನ್ನು ಸ್ವೇಚ್ಛೆಯಿಂದ ಬಳಸಲು ಅವಕಾಶವಿದೆ. ಹೀಗಾಗಿ ಅದು ಅಸಾಂವಿಧಾನಿಕ. ಸಂವಿ
ಧಾನದ 20(1)ನೇ ವಿಧಿಯ ಪ್ರಕಾರ, ಯಾವುದೇ ಕಾನೂ
ನನ್ನು ಅಪರಾಧಗಳಿಗೆ
ಪೂರ್ವಾನ್ವಯ ಮಾಡುವಂತಿಲ್ಲ. ಹೀಗಾಗಿ ಈ ಕಾಯ್ದೆಗೆ 2016ರಲ್ಲಿ ತರಲಾದ ತಿದ್ದುಪಡಿಗಳನ್ನು ಪೂರ್ವಾನ್ವಯ ಮಾಡುವುದೂ ಅಸಾಂವಿಧಾನಿಕ’ ಎಂದು ಸಿಜೆಐ ಎನ್‌.ವಿ.ರಮಣ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ಪೀಠವು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.