ADVERTISEMENT

ಪಶ್ಚಿಮ ಬಂಗಾಳ ಸರ್ಕಾರದ ಶಿಫಾರಸು ವಾಪಸ್‌ ಕಳುಹಿಸಿದ ರಾಜ್ಯಪಾಲ

ಪಿಟಿಐ
Published 19 ಫೆಬ್ರುವರಿ 2022, 21:06 IST
Last Updated 19 ಫೆಬ್ರುವರಿ 2022, 21:06 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಮಾರ್ಚ್‌ 7ರಿಂದ ವಿಧಾನಸಭೆ ಅಧಿವೇಶನ ಕರೆಯುವ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಳುಹಿಸಿದ್ದ ಶಿಫಾರಸನ್ನು ರಾಜ್ಯಪಾಲ ಜಗದೀಪ್ ಧನ್‌ಕರ್ ಅವರು ಶನಿವಾರ ವಾಪಸ್‌ ಕಳುಹಿಸಿದ್ದಾರೆ.

ರಾಜ್ಯ ಸಚಿವ ಸಂಪುಟವು ಸಾಂವಿಧಾನಿಕ ಮಾನದಂಡಗಳನ್ನು ಅನುಸರಿಸದ ಶಿಫಾರಸು ಮಾಡಿದ ಕಾರಣ ಅದನ್ನು ಹಿಂದಿರುಗಿಸಲಾಗಿದೆ ಎಂದು ರಾಜ್ಯಪಾಲರು ಟ್ವೀಟ್‌ ಮಾಡಿದ್ದಾರೆ.

ಕಡತವನ್ನು ವಾಪಸ್‌ ಕಳುಹಿಸುವಾಗ ಅದರ ಜೊತೆ ರಾಜ್ಯ ಸರ್ಕಾರಕ್ಕೆ ಪತ್ರವೊಂದನ್ನೂ ರಾಜ್ಯಪಾಲರು ಕಳುಹಿಸಿದ್ದಾರೆ.

ADVERTISEMENT

ರಾಜ್ಯಪಾಲರ ನಡೆ ಆಡಳಿತ ಕಾರ್ಯವನ್ನು ಸ್ಥಗಿತಗೊಳಿಸುವ ಯತ್ನ ಎಂದು ಟಿಎಂಸಿ ವಕ್ತಾರ ಸುಖೇಂದು ಶೇಖರ್‌ ರಾಯ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.