
ಕೋಲ್ಕತ್ತ: ಬಂಗಾಳದ ಖ್ಯಾತ ನಟ, ಟಿಎಂಸಿ ಸಂಸದ ದೇವ್ (ದೀಪಕ್ ಅಧಿಕಾರಿ) ಅವರು ಎಸ್‌ಐಆರ್ ಪರಿಶೀಲನೆ ಸಂಬಂಧಿತ ವಿಚಾರಣೆಗೆ ಬುಧವಾರ ಬೆಳಿಗ್ಗೆ ಹಾಜರಾಗಿದ್ದು, ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿರುವುದಾಗಿ ಹೇಳಿದ್ದಾರೆ.
ಜಾಧವಪುರದ ಕಾಟಜುನಗರ ಸ್ವರ್ಣಮಯಿ ವಿದ್ಯಾಪೀಠದಲ್ಲಿ (ಎಚ್‌ಎಸ್) ವಿಚಾರಣೆ ನಡೆದಿದೆ. ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ.
‘ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯವನ್ನು ಪಾಲಿಸಿದ್ದೇನೆ ಹಾಗೂ ಅಗತ್ಯವಿರುವ ಎಲ್ಲಾ ದಾಖಲೆಗಳನ್ನೂ ಒದಗಿಸಿದ್ದೇನೆ. ಮತದಾನವು ಜನರ ಪಾಲಿಗೆ ಹಬ್ಬವಿದ್ದಂತೆ. ಯಾವುದೇ ಅರ್ಹ ವ್ಯಕ್ತಿಯೂ ಇದರಿಂದ ಹೊರಗುಳಿಯಬಾರದು’ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ವೃದ್ಧ ಮತ್ತು ಅನಾರೋಗ್ಯಕ್ಕೀಡಾದ ಹಲವು ಮತದಾರರು ತಮ್ಮ ದಾಖಲೆಗಳನ್ನು ಸಲ್ಲಿಸಲು ಸರದಿಯಲ್ಲಿ ನಿಂತು ಕಷ್ಟಪಡುತ್ತಿರುವ ಬಗ್ಗೆ ಮಾತನಾಡಿ, ಅಂತಹ ಮತದಾರರ ದಾಖಲೆಗಳನ್ನು ಅವರ ನಿವಾಸಗಳ ಬಳಿಯೇ ಪಡೆದುಕೊಳ್ಳುವ ಬಗ್ಗೆ ಚುನಾವಣಾ ಆಯೋಗ (ಇಸಿ) ಗಮನಹರಿಸಬೇಕು ಎಂದೂ ದೇವ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.