ADVERTISEMENT

ಹೂಡಿಕೆ ವಂಚನೆ: ನಾಲ್ವರ ಬಂಧನ

ಪಿಟಿಐ
Published 2 ಸೆಪ್ಟೆಂಬರ್ 2024, 16:38 IST
Last Updated 2 ಸೆಪ್ಟೆಂಬರ್ 2024, 16:38 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ವಂಚನೆಯ ಉದ್ದೇಶದ ಸ್ಮಾರ್ಟ್‌ಫೋನ್‌ ಆ್ಯಪ್‌ಗಳನ್ನು ಬಳಸಿ, ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡುವುದಾಗಿ ಜನರನ್ನು ಮೋಸಗೊಳಿಸಿದ ಆರೋಪದ ಅಡಿ ನಾಲ್ಕು ಮಂದಿಯನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಇವರನ್ನು ಬಂಧಿಸಲಾಗಿದೆ.

ADVERTISEMENT

ಶಶಿ ಕುಮಾರ್ ಎಂ., ಸಚಿನ್ ಎಂ., ಕಿರಣ್ ಎಸ್.ಕೆ. ಎನ್ನುವವರನ್ನು ಆಗಸ್ಟ್ 15ರಂದು ಬಂಧಿಸಲಾಗಿದೆ. ಚರಣ್ ರಾಜ್ ಸಿ. ಎನ್ನುವವರನ್ನು ಆಗಸ್ಟ್ 21ರಂದು ಬಂಧಿಸಲಾಗಿದೆ ಎಂದು ಇ.ಡಿ. ಪ್ರಕಟಣೆ ತಿಳಿಸಿದೆ.

ನಕಲಿ ಐಪಿಒ ಹಾಗೂ ಕೆಲವು ಷೇರುಗಳಲ್ಲಿ ಹೂಡಿಕೆ ಮಾಡಲು ಆರೋಪಿಗಳು ಸಾರ್ವಜನಿಕರನ್ನು ಪ‍್ರೇರೇಪಿಸುತ್ತಿದ್ದರು, ಅವರಿಂದ ಕೆಲವು ಶೆಲ್ ಕಂಪನಿಗಳ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು ಎಂದು ಇ.ಡಿ. ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.