ADVERTISEMENT

ಭಾರತ್ ಬಯೋಟೆಕ್ ಕೋವಿಡ್ ನೇಸಲ್‌ ಲಸಿಕೆ: 2, 3ನೇ ಪ್ರಯೋಗಕ್ಕೆ ಅನುಮೋದನೆ

ಪಿಟಿಐ
Published 13 ಆಗಸ್ಟ್ 2021, 15:22 IST
Last Updated 13 ಆಗಸ್ಟ್ 2021, 15:22 IST
ಕೊರೊನಾ ವೈರಸ್‌–ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್‌–ಪ್ರಾತಿನಿಧಿಕ ಚಿತ್ರ    

ನವದೆಹಲಿ: ‘ಕೋವಿಡ್‌ ನಿಯಂತ್ರಣಕ್ಕಾಗಿ ಮೂಗಿನ ಮೂಲಕ ಬಳಸಬಹುದಾದ ದೇಶದ ಮೊದಲ ಕೋವಿಡ್ ಇಂಟ್ರಾನೇಸಲ್‌ ಲಸಿಕೆಯನ್ನು ಭಾರತ್ ಬಯೋಟೆಕ್ ಕಂಪನಿಯ ಅಭಿವೃದ್ಧಿ ಪಡಿಸಿದ್ದು, ಇದರ 2 ಮತ್ತು 3ನೇ ಕ್ಲಿನಿಕಲ್ ಪ್ರಯೋಗಕ್ಕೆ ಔಷಧ ನಿಯಂತ್ರಕರ ಅನುಮೋದನೆ ದೊರೆತಿದೆ’ ಎಂದು ಜೈವಿಕ ತಂತ್ರಜ್ಞಾನ ಇಲಾಖೆ ಶುಕ್ರವಾರ ತಿಳಿಸಿದೆ.

‘ಈ ಲಸಿಕೆಯ ಮೊದಲ ಕ್ಲಿನಿಕಲ್ ಪ್ರಯೋಗವನ್ನು 18 ರಿಂದ 60 ವರ್ಷ ವಯೋಮಾನದವರ ಮೇಲೆ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಭಾರತದಲ್ಲಿ ಮಾನವನ ಮೇಲೆ ಕ್ಲಿನಿಕಲ್ ಪ್ರಯೋಗಕ್ಕೊಳಗಾದ ಮೊದಲ ಕೋವಿಡ್ ಇಂಟ್ರಾನೇಸಲ್‌ಲಸಿಕೆ ಇದಾಗಿದೆ’ ಎಂದೂ ಇಲಾಖೆ ಮಾಹಿತಿ ನೀಡಿದೆ.

ಭಾರತ್ ಬಯೋಟೆಕ್ ಕಂಪನಿಯು, ಅಮೆರಿಕದ ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಪರವಾನಗಿ ಪಡೆದ ತಂತ್ರಜ್ಞಾನವನ್ನು ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.