ADVERTISEMENT

ಗಡ್ಕರಿ, ಫಡಣವೀಸ್‌ ತವರಿನಲ್ಲಿ ಬಿಜೆಪಿಗೆ ಮುಖಭಂಗ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 17:24 IST
Last Updated 2 ಫೆಬ್ರುವರಿ 2023, 17:24 IST

ಮುಂಬೈ: ಮಹಾರಾಷ್ಟ್ರದ ನಾಗ್ಪುರ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಮಹಾ ವಿಕಾಸ್‌ ಆಘಾಡಿ (ಎಂವಿಎ) ಮೈತ್ರಿಯ ಅಭ್ಯರ್ಥಿ ಸುಧಾಕರ್‌ ಆಡಬಾಲೆ ಗುರುವಾರ ಗೆಲುವು ಸಾಧಿಸಿದ್ದು, ಬಿಜೆಪಿಗೆ ಮುಖಭಂಗವಾಗಿದೆ.

ಬಿಜೆಪಿಯ ಸಿದ್ಧಾಂತದ ಪೋಷಕ ಸಂಘಟನೆ ಆರೆಸ್ಸೆಸ್‌ ಪ್ರಧಾನ ಕಚೇರಿ ಹೊಂದಿರುವ, ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಂಥ ಘಟಾನುಘಟಿಗಳ ತವರು ನೆಲದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಗೋ ಗಾಣಾರ್‌ ಅವರಿಗೆ ಸೋಲುಂಟಾಗಿದೆ. ಇದು ಪಕ್ಷಕ್ಕೆ ಆಗಿರುವ ಬಹುದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT