ADVERTISEMENT

ಬೀಚ್‌ಗಳಲ್ಲಿ ಬಿಕಿನಿ ಧರಿಸಿ, ಶಾಲೆಗಳಲ್ಲಿ ಅಲ್ಲ: ಸುಮಲತಾ ಅಂಬರೀಷ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 17:51 IST
Last Updated 9 ಫೆಬ್ರುವರಿ 2022, 17:51 IST
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್   

ನವದೆಹಲಿ: ‘ಬೀಚ್‌ಗಳಲ್ಲಿ ಅಥವಾ ಈಜುಕೊಳದಲ್ಲಿ ಬಿಕಿನಿ ಧರಿಸಬಹುದು. ಶಾಲೆಗಳಲ್ಲಿ ಅಲ್ಲ. ಪ್ರತಿಯೊಂದು ಸ್ಥಳಕ್ಕೂ ಸಂಬಂಧಪಟ್ಟಂತೆ ವಸ್ತ್ರಸಂಹಿತೆ ಎಂಬುದು ಇದೆ’ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಬುಧವಾರ ಇಲ್ಲಿ ಹೇಳಿದರು.

ಹಿಜಾಬ್‌ ಕುರಿತ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ‘ಮನೆಯಲ್ಲಿ ಧಾರ್ಮಿಕ ಆಚರಣೆಗಳನ್ನು ಅನುಸರಿಸಬೇಕು, ಶಾಲೆಗಳಲ್ಲಿ ಅಲ್ಲ. ಪ್ರತಿಯೊಬ್ಬರು ಶಿಕ್ಷಣಕ್ಕಾಗಿಯೇ ಶಾಲೆಗೆ ಬರುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.