ಬುಲಂದ್‌ಶಹರ್ (ಉತ್ತರ ಪ್ರದೇಶ): ಸ್ಥಳೀಯ ಶಾಸಕರಪುತ್ರನೊಬ್ಬನುಮದುವೆ ಸಮಾರಂಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿಸಂಭ್ರಮಿಸಿದ್ದಾನೆ. ನಿಷೇಧದಹೊರತಾಗಿಯೂಬಂದೂಕುಬಳಸಿದ್ದರಿಂದ ಪೊಲೀಸರುಪ್ರಕರಣ ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ.
ಗಾಳಿಯಲ್ಲಿ ಗುಂಡು ಹಾರಿಸುವವಿಡಿಯೊಸಾಮಾಜಿಕಜಾಲತಾಣಗಳಲ್ಲಿಹರಿದಾಡಿದ್ದು, ಆರೋಪಿ ಕುರೂಜ್ ಕ್ಷೇತ್ರದ ಶಾಸಕವಿಜೇಂದ್ರಸಿಂಗ್ ಕಾಥಿಕ್ ಅವರಮಗನಾಗಿದ್ದಾನೆ.
ವಿಡಿಯೊಸಾಮಾಜಿಕಜಾಲತಾಣದಲ್ಲಿಹರಿದಾಡುತ್ತಿದ್ದುಬಳಿಕಪೊಲೀಸರಕಣ್ಣಿಗೆ ಬಿದ್ದಿದೆ. ವಿಡಿಯೊದಲ್ಲಿಗುಂಡು ಹಾರಿಸಿದವನನ್ನು ಸ್ಥಳೀಯ ಶಾಸಕನ ಮಗನೆಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಸಂತೋಶ್ಕುಮಾರ್ ಹೇಳಿದ್ದಾರೆ.
ಸಮಾರಂಭಗಳಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದರೆ ₹1,00,000 ದಂಡ ಅಥವಾ 2 ವರ್ಷ ಜೈಲುಶಿಕ್ಷೆ ವಿಧಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.