ADVERTISEMENT

ಉತ್ತರಾಖಂಡ ಬಿಜೆಪಿ ಶಾಸಕನ ಅಮಾನತು ರದ್ದು

ಕೈಯಲ್ಲಿ ಗನ್‌ ಹಿಡಿದು ನೃತ್ಯ ಮಾಡಿದ್ದ ಕನ್ವಾರ್‌ ಪ್ರಣವ್‌ ಸಿಂಗ್

ಪಿಟಿಐ
Published 24 ಆಗಸ್ಟ್ 2020, 11:53 IST
Last Updated 24 ಆಗಸ್ಟ್ 2020, 11:53 IST
ಕನ್ವಾರ್‌ ಪ್ರಣವ್‌ ಸಿಂಗ್
ಕನ್ವಾರ್‌ ಪ್ರಣವ್‌ ಸಿಂಗ್   

ಡೆಹ್ರಾಡೂನ್‌: ಕೈಯಲ್ಲಿ ಗನ್‌ ಹಿಡಿದು ನೃತ್ಯ ಮಾಡುತ್ತಿದ್ದ ವಿಡಿಯೊ ವೈರಲ್‌ ಆಗಿ ವಿವಾದಕ್ಕೆ ಒಳಗಾಗಿದ್ದ ಉತ್ತರಾಖಂಡ ಖಾನ್‌ಪುರದ ಬಿಜೆಪಿ ಶಾಸಕ ಕನ್ವಾರ್‌ ಪ್ರಣವ್‌ ಸಿಂಗ್‌ ಅವರ ಅಮಾನತು ಆದೇಶವನ್ನು ಉತ್ತರಾಖಂಡ ಬಿಜೆಪಿ ಘಟಕ ಸೋಮವಾರ ರದ್ದುಗೊಳಿಸಿದೆ.

ಕಳೆದ ವರ್ಷದ ಜೂನ್‌ನಲ್ಲಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು. ‘13 ತಿಂಗಳಲ್ಲಿ ಅವರ ಸಭ್ಯ ನಡವಳಿಕೆ, ಪಕ್ಷದ ವರಿಷ್ಠರಲ್ಲಿ ಕ್ಷಮಾಪಣೆ ಕೇಳಿರುವುದನ್ನು ಪರಿಗಣಿಸಿ ಅಮಾನತು ಹಿಂಪಡೆಯಲು ಪಕ್ಷದ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ಉತ್ತರಾಖಂಡ ಬಿಜೆಪಿ ಘಟಕದ ಅಧ್ಯಕ್ಷ ಬನ್ಸಿಧಾರ್‌ ಭಗತ್‌ ತಿಳಿಸಿದರು.

ಶಾಸಕ ದೇಶ್‌ರಾಜ್‌ ಕರ್ನಾವಾಲ್‌ ಅವರೊಂದಿಗೆ ಬಹಿರಂಗವಾಗಿ ಜಗಳವಾಡಿದ್ದ ಕಾರಣಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದಡಿ ಮೊದಲು ಅವರನ್ನು 3 ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಜೊತೆಗೆ ಟಿವಿ ಮಾಧ್ಯಮದ ವರದಿಗಾರರೊಬ್ಬರನ್ನು ನಿಂದಿಸಿದ ಆರೋಪವೂ ಅವರ ಮೇಲಿತ್ತು. ಇದೇ ವೇಳೆ ಗನ್‌ ಹಿಡಿದು ನೃತ್ಯ ಮಾಡುತ್ತಿದ್ದ ವಿಡಿಯೊ ವೈರಲ್‌ ಆದ ಕಾರಣ ಅನಿರ್ಧಿಷ್ಟಾವಧಿಗೆ ಅವರನ್ನು ಅಮಾನತುಗೊಳಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.