ADVERTISEMENT

ಸಿಎಎ ಅರ್ಥವಾಗದಿದ್ದರೆ ಇಟಾಲಿಯನ್‌ಗೆ ಭಾಷಾಂತರಿಸಿ ಕೊಡ್ತೀವಿ: ರಾಹುಲ್‌ಗೆ ಶಾ

ಏಜೆನ್ಸೀಸ್
Published 4 ಜನವರಿ 2020, 13:37 IST
Last Updated 4 ಜನವರಿ 2020, 13:37 IST
ಅಮಿತ್ ಶಾ (ಪಿಟಿಐ ಸಂಗ್ರಹ ಚಿತ್ರ)
ಅಮಿತ್ ಶಾ (ಪಿಟಿಐ ಸಂಗ್ರಹ ಚಿತ್ರ)   

ಜೋಧ್‌ಪುರ:‘ರಾಹುಲ್ ಬಾಬಾ ಅವರೇ, ನೀವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಓದಿರದೇಇದ್ದರೆ ನಾನು ಅದನ್ನು ಇಟಾಲಿಯನ್‌ಗೆ ಭಾಷಾಂತರಿಸಿ ನಿಮಗೆ ಸಹಾಯ ಮಾಡಬಲ್ಲೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.

ರಾಜಸ್ಥಾನದಲ್ಲಿ ಸಿಎಎ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ರಾಹುಲ್ ಬಾಬಾ ಅವರೇ,ನೀವು ಸಿಎಎ ಓದಿದ್ದರೆ ಎಲ್ಲಿಗೆ ಬೇಕಾದರೂ ಚರ್ಚೆಗೆ ಬನ್ನಿ. ಓದಿರದೇಇದ್ದರೆ ನಾನು ಕಾಯ್ದೆಯನ್ನು ಇಟಾಲಿಯನ್‌ಗೆ ಭಾಷಾಂತರಿಸಿ ನಿಮಗೆ ಸಹಾಯ ಮಾಡಬಲ್ಲೆ. ದಯಮಾಡಿ ಅದನ್ನು ಓದಿಕೊಳ್ಳಿ’ ಎಂದು ಶಾ ಕುಟುಕಿದ್ದಾರೆ.

ಸಿಎಎ ವಿಚಾರದಲ್ಲಿ ಕಾಂಗ್ರೆಸ್‌ ಮುಸ್ಲಿಮರ ದಾರಿತಪ್ಪಿಸುತ್ತಿದೆ.ವಿಪಕ್ಷಗಳೆಲ್ಲವೂ ಎಷ್ಟೇ ವಿರೋಧಿಸಿದರೂ, ಸಿಎಎ ಅನುಷ್ಠಾನದ ನಿರ್ಧಾರದಿಂದ ಒಂದಿಂಚೂ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶಾ ಹೇಳಿದ್ದಾರೆ.ಸಿಎಎ ಕುರಿತು ಸುಳ್ಳು ಸುದ್ದಿಯ ಅಭಿಯಾನವನ್ನು ಕಾಂಗ್ರೆಸ್‌ ಹಾಗೂ ಇತರೆ ವಿಪಕ್ಷಗಳು ನಡೆಸುತ್ತಿವೆ. ತಿದ್ದುಪಡಿ ಕಾಯ್ದೆಯು ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ. ಬದಲಾಗಿ ಪೌರತ್ವವನ್ನು ನೀಡುವ ಕಾಯ್ದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.