
ಪಿಟಿಐ
ಚಂಡೀಗಢ: ಗಾಳಿಪಟದ ಬೆನ್ನತ್ತಿ, ರೈಲು ಹಳಿ ಮೇಲೆ ಓಡುತ್ತಿದ್ದ ಇಬ್ಬರು ಬಾಲಕರು ರೈಲು ಹರಿದು ಸಾವಿಗೀಡಾಗಿರುವ ಘಟನೆ ಚಂಡೀಗಢದ ಹೊರವಲಯದಲ್ಲಿ ಭಾನುವಾರ ಸಂಜೆ ನಡೆದಿದೆ.
ಬಾಲಕರ ಗುಂಪೊಂದು, ದಾರದಿಂದ ಬೇರ್ಪಟ್ಟು ಹಾರಾಡುತ್ತಿದ್ದ ಗಾಳಿಪಟವನ್ನು ಬೆನ್ನತ್ತಿತ್ತು. ಇದೇ ವೇಳೆ ಅಂಬಾಲಾದಿಂದ ಜಲಂಧರ್‌ಗೆ ಹೊರಟಿದ್ದ ರೈಲಿಗೆ ಬಾಲಕರು ಡಿಕ್ಕಿಯಾಗಿದ್ದಾರೆ. 10 ಮತ್ತು 13 ವರ್ಷದ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.