ನವದೆಹಲಿ:ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ಯೋಧಮೊಹಮ್ಮದ್ ಅನೀಸ್‌ಗೆ ಬಿಎಸ್‌ಎಫ್ ₹10 ಲಕ್ಷ ನೆರವು ನೀಡಿದೆ. ಫೆಬ್ರುವರಿ 25ರಂದು ಹಿಂಸಾಚಾರದ ವೇಳೆ ದುಷ್ಕರ್ಮಿಗಳು ಅನೀಸ್ ಮನೆಗೆ ಬೆಂಕಿ ಹಚ್ಚಿದ್ದರು.
ಮನೆ ಕಳೆದುಕೊಂಡಿರುವಅನೀಸ್‌ಗೆ ಸೋಮವಾರ ಬಿಎಸ್‌ಎಫ್ ಮಹಾ ನಿರೀಕ್ಷಕ ಡಿಕೆ ಉಪಾಧ್ಯಾಯ್ ಅವರು ₹10 ಲಕ್ಷ ಮೊತ್ತದ ಚೆಕ್ ನೀಡಿದ್ದಾರೆ.
ಅನೀಸ್ ಅವರ ಮದುವೆ ನಿಗದಿಯಾಗಿದ್ದು, ಮದುವೆ ಸಮಾರಂಭಕ್ಕೆಮನೆಯಲ್ಲಿ ಸಿದ್ದತೆ ನಡೆಯುತ್ತಿದೆ. ಬಿಎಸ್‌ಎಫ್ ಅಧಿಕಾರಿಗಳು ಭಾನುವಾರ ಇವರ ಮನೆಗೆ ಭೇಟಿ ನೀಡಿದ್ದು, ಮನೆನಿರ್ಮಾಣ ಕಾರ್ಯದಲ್ಲಿ ಬಿಎಸ್‌ಎಫ್ ಸಹೋದ್ಯೋಗಿಗಳು ಸಹಾಯ ಮಾಡುತ್ತಿದ್ದಾರೆ.
ನಾಲ್ಕು ದಿನಗಳ ಕಾಲ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಸೇರಿದಂತೆ 47 ಮಂದಿ ಸಾವಿಗೀಡಾಗಿದ್ದರು. 200ಕ್ಕಿಂತಲೂ ಹೆಚ್ಚು ಮಂದಿಗೆ ಗಾಯಗಳಾಗಿತ್ತು.
ಇದನ್ನೂ ಓದಿ:ಈಶಾನ್ಯ ದೆಹಲಿ: ಬೂದಿ ಮುಚ್ಚಿದ ಕೆಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.