ADVERTISEMENT

ಬಾಂಗ್ಲಾದೇಶಿಗರ ಒಳನುಸುಳುವಿಕೆ ಯತ್ನ ತಡೆದ ಬಿಎ‌ಸ್‌ಎಫ್‌

​ಪ್ರಜಾವಾಣಿ ವಾರ್ತೆ
Published 27 ಮೇ 2025, 16:40 IST
Last Updated 27 ಮೇ 2025, 16:40 IST
   

ಗುವಾಹಟಿ: ಬಾಂಗ್ಲಾದೇಶಿಗರ ದೊಡ್ಡ ಗುಂಪೊಂದು ಭಾರತಕ್ಕೆ ಅಸ್ಸಾಂ ಮೂಲಕ ಒಳನುಸುಳಲು ನಡೆಸಿರುವ ಯತ್ನವನ್ನು ಬಿಎಸ್‌ಎಫ್‌ ಮಂಗಳವಾರ ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಸಲ್ಮಾರಾ ಮಂಕಚಾರ್ ಜಿಲ್ಲೆಯಲ್ಲಿನ ಅಂತರರಾಷ್ಟ್ರೀಯ ಗಡಿಯಿಂದ ಬಾಂಗ್ಲಾದೇಶಿಗರ ದೊಡ್ಡ ಗುಂಪೊಂದು ಮಂಗಳವಾರ ನಸುಕಿನಲ್ಲಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಲು ಪ್ರಯತ್ನಿಸಿತ್ತು. ಇದನ್ನು ವಿಫಲಗೊಳಿಸುವಲ್ಲಿ ಬಿಎಸ್‌ಎಫ್‌ ಯೋಧರು ಯಶಸ್ವಿಯಾಗಿದ್ದಾರೆ ಎಂದು ಬಿಎಸ್‌ಎಫ್‌ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT