ADVERTISEMENT

ಲೋಕಸಭಾ ಕಲಾಪದಲ್ಲಿ ಭಾಗವಹಿಸಿದ್ದ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಅವರಿಗೆ ಕೋವಿಡ್

ಪಿಟಿಐ
Published 21 ಡಿಸೆಂಬರ್ 2021, 12:53 IST
Last Updated 21 ಡಿಸೆಂಬರ್ 2021, 12:53 IST
ಡ್ಯಾನಿಶ್ ಅಲಿ: ಐಎಎನ್‌ಎಸ್ ಚಿತ್ರ
ಡ್ಯಾನಿಶ್ ಅಲಿ: ಐಎಎನ್‌ಎಸ್ ಚಿತ್ರ    

ಲೋಕಸಭಾ: ಸೋಮವಾರ ಲೋಕಸಭಾ ಕಲಾಪದಲ್ಲಿ ಭಾಗವಹಿಸಿದ್ದ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಅವರಿಗೆ ಕೋವಿಡ್ ದೃಢಪಟ್ಟಿದೆ.

ಎರಡೂ ಡೋಸ್ ಲಸಿಕೆ ಪಡೆದಿರುವ ಸಂಸದರಿಗೆ ಸೌಮ್ಯ ರೋಗಲಕ್ಷಣಗಳಿವೆ. ಈ ಬಗ್ಗೆ ಮಂಗಳವಾರ ಅಲಿ ಟ್ವೀಟ್ ಮಾಡಿದ್ದಾರೆ.

‘ಸಂಪೂರ್ಣ ಲಸಿಕೆ ಪಡೆದಿದ್ದರೂ ಸಹ ಇಂದು ನನಗೆ ಕೋವಿಡ್ ದೃಢಪಟ್ಟಿದೆ. ನಿನ್ನೆ ನಾನು ಸಂಸತ್ತಿನ ಕಲಾಪದಲ್ಲಿ ಭಾವಹಿಸಿದ್ದೆ. ಹಾಗಾಗಿ, ನನ್ನ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಮತ್ತು ಪ್ರತ್ಯೇಕವಾಸದ ನಿಯಮ ಪಾಲಿಸಬೇಕು’ಎಂದು ಮನವಿ ಮಾಡಿದ್ದಾರೆ.

ADVERTISEMENT

‘ನನಗೆ ಸೌಮ್ಯ ರೋಗಲಕ್ಷಣಗಳಿದ್ದು, ಬೇಗ ಗುಣಮುಖನಾಗುವ ವಿಶ್ವಾಸ ಇದೆ’ಎಂದು ಅವರು ತಿಳಿಸಿದ್ಧಾರೆ.

ಡಿಸೆಂಬರ್ 23ಕ್ಕೆ ಸಂಸತ್ತಿನ ಚಳಿಗಾಲದ ಅಧಿವೇಶನ ಅಂತ್ಯವಾಗುತ್ತಿದೆ. ಅದಕ್ಕೂ ಮುನ್ನವೇ ಒಬ್ಬ ಸಂಸದರಿಗೆ ಕೋವಿಡ್ ದೃಢಪಟ್ಟಿದ್ದು, ಇತರೆ ಸಂಸದರಿಗೆ ಆತಂಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.