ADVERTISEMENT

ಈಶಾನ್ಯ ದೆಹಲಿಯಲ್ಲಿ ಕಟ್ಟಡ ಕುಸಿತ: ವ್ಯಕ್ತಿ ಸಾವು

ಪಿಟಿಐ
Published 24 ಜುಲೈ 2022, 11:04 IST
Last Updated 24 ಜುಲೈ 2022, 11:04 IST

ನವದೆಹಲಿ (ಪಿಟಿಐ): ‘ಈಶಾನ್ಯ ದೆಹಲಿಯ ಮುಸ್ತಾಫಾಬಾದ್‌ನಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತನ ಕುಟುಂಬದ ಆರು ಮಂದಿಯನ್ನು ರಕ್ಷಣೆ ಮಾಡಲಾಗಿದೆ’ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.

‘ಘಟನೆಯು ಭಾನುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ನಡೆದಿದ್ದು, ಕೂಡಲೇ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು’ ಎಂದು ದೆಹಲಿ ಅಗ್ನಿ ಶಾಮಕ ದಳದ ನಿರ್ದೇಶಕ ಅತುಲ್‌ ಗಾರ್ಗ್‌ ಹೇಳಿದರು.

‘ಸೂಫಿಯಾನ್‌ ಎಂಬಾತ ಮೃತ ವ್ಯಕ್ತಿ. ಕಟ್ಟಡದ ಅವಶೇಷಗಳಿಂದ ಆತನನ್ನು ಕಷ್ಟಪಟ್ಟು ಹೊರತೆಗೆದು, ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಗಲೇ ಮೃತಯಪಟ್ಟಿರುವುದಾಗಿ ವೈದ್ಯರು ತಿಳಿಸಿದರು’ ಎಂದೂ ಪೊಲೀಸರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.