ADVERTISEMENT

ಪ್ರಧಾನಿಯನ್ನು ಅಭಿನಂದಿಸಿ ಸಂಪುಟ ನಿರ್ಣಯ

ಪಿಟಿಐ
Published 24 ಜನವರಿ 2024, 20:37 IST
Last Updated 24 ಜನವರಿ 2024, 20:37 IST
.....
.....   

ನವದೆಹಲಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿ ಕೇಂದ್ರ ಸಚಿವ ಸಂಪುಟವು ನಿರ್ಣಯ ಕೈಗೊಂಡಿದೆ. ‘ಮೋದಿ ಅವರು ಜನರ ಶತಮಾನಗಳ ಕನಸನ್ನು ನನಸು ಮಾಡಿದ್ದಾರೆ’ ಎಂದು ಸಚಿವ ಸಂಪುಟವು ಶ್ಲಾಘಿಸಿದೆ.

‘ಸಂಪುಟವು ಸಭೆ ಸೇರುತ್ತಿದ್ದಂತೆಯೇ, ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಸಂಪುಟದ ಸಹೋದ್ಯೋಗಿಗಳ ಪರವಾಗಿ ನಿರ್ಣಯವನ್ನು ಓದಿ ಹೇಳಿದರು’ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT