ADVERTISEMENT

‘ಇಲಿಗಳಿಂದ ಇವಿಎಂ ರಕ್ಷಿಸಿ’

ಪಿಟಿಐ
Published 9 ಮೇ 2019, 18:10 IST
Last Updated 9 ಮೇ 2019, 18:10 IST
ಇವಿಎಂ
ಇವಿಎಂ   

ಮಥುರಾ: ಇಲ್ಲಿನ ಮಂಡಿ ಸಮಿತಿ ಪ್ರದೇಶದಮತಯಂತ್ರಗಳನ್ನು ಇರಿಸಿರುವ ಸ್ಟ್ರಾಂಗ್‌ರೂಂನಲ್ಲಿ ಇಲಿಗಳ ಹಾವಳಿ ಇದ್ದು, ಮತಯಂತ್ರಗಳನ್ನು ಹಾನಿಪಡಿಸಬಹುದು ಎಂದು ಅಭ್ಯರ್ಥಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಇದನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಮಥುರಾ ಕ್ಷೇತ್ರದ, ರಾಷ್ಟ್ರೀಯ ಲೋಕದಳದ ಅಭ್ಯರ್ಥಿ ನರೇಂದ್ರ ಸಿಂಗ್ ವಾರದ ಹಿಂದೆ ಈ ಸಂಬಂಧ ಮನವಿ ಸಲ್ಲಿಸಿದ್ದು, ಮತಯಂತ್ರ ಇಟ್ಟಿರುವ ಸ್ಟ್ರಾಂಗ್‌ ರೂಂ ಸುತ್ತಲೂ ತಂತಿ ಜಾಲರಿ ಅಳವಡಿಸಬೇಕು ಎಂದು ಕೋರಿದ್ದರು.

‘ಮತಯಂತ್ರಗಳನ್ನು ಇಟ್ಟಿರುವ ಕೊಠಡಿ ಸುರಕ್ಷಿತವಾಗಿದೆ. ಇಲಿಗಳಿಂದ ಯಾವುದೇ ಆತಂಕವಿಲ್ಲ’ ಎಂದು ಜಿಲ್ಲಾ ಚುನಾವಣಾಧಿಕಾರಿ ಸರ್ವಜ್ಞರಾಮ್‌ ಮಿಶ್ರಾ ಹೇಳಿದ್ದಾರೆ. ಕೊಠಡಿ ಹಾಗೂ ಸುತ್ತಲಿನ ಪರಿಸರವನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅದಾದ ಬಳಿಕ ಮತಯಂತ್ರಗಳಿಗೆ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.