ADVERTISEMENT

ಪೋಕ್ಸೊ ಪ್ರಕರಣ: ನಿರೀಕ್ಷಣಾ ಜಾಮೀನು ನಿರಾಕರಿಸಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 15:31 IST
Last Updated 8 ಜೂನ್ 2022, 15:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಯೊಬ್ಬನಿಗೆ ನಿರೀಕ್ಷಣಾ ಜಾಮೀನು ನೀಡಲು ಬುಧವಾರ ನಿರಾಕರಿಸಿರುವ ಸುಪ್ರೀಂ ಕೋರ್ಟ್, ‘ಇಂತಹದ್ದನ್ನೆಲ್ಲ ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದೆ.

ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಅನಿರುದ್ಧ ಬೋಸ್ ಅವರಿದ್ದ ರಜಾಕಾಲದ ಪೀಠವು, ಕಲ್ಕತ್ತಾ ಹೈಕೋರ್ಟ್‌ ಈ ವರ್ಷದ ಮೇನಲ್ಲಿ ಜಾಮೀನು ನಿರಾಕರಿಸಿ ನೀಡಿರುವ ಆದೇಶದ ವಿರುದ್ಧದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿತು.ಆರೋಪಿ ಕೋರಿದ್ದ ನಿರೀಕ್ಷಣಾ ಜಾಮೀನು ಮನವಿಯನ್ನು ಪೀಠ ತಿರಸ್ಕರಿಸಿತು.

ಪಶ್ಚಿಮ ಬಂಗಾಳದಲ್ಲಿ ಚಿಕ್ಕ ಹುಡುಗಿಯ ಆಕ್ಷೇಪಾರ್ಹ ಛಾಯಾಚಿತ್ರವನ್ನು ತೆಗೆದು, ನಂತರ ಆಕೆಗೆ ಬೆದರಿಕೆ ಹಾಕಿರುವ ಸಂಬಂಧ ಆಪಾದಿತನ ವಿರುದ್ಧ ಐಪಿಸಿ ಮತ್ತು ಪೋಕ್ಸೊ ಕಾಯ್ದೆಯಡಿಕಳೆದ ಅಕ್ಟೋಬರ್‌ನಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ADVERTISEMENT

‘ಅಪರಾಧ ಪ್ರಕ್ರಿಯೆ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 164ರ ಅಡಿಯಲ್ಲಿಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ನೀಡಿರುವ ಹೇಳಿಕೆಗಳು ಗಂಭೀರವಾಗಿದ್ದು, ಆರೋಪಿಯ ವಿರುದ್ಧವಾಗಿವೆ’ ಎಂಬುದನ್ನು ಪೀಠ ಗಮನಿಸಿತು.

‘ನೀವು ಚಿಕ್ಕ ಹುಡುಗಿಯ ನಗ್ನ ಛಾಯಾಚಿತ್ರ ತೆಗೆದು, ನಂತರ ಆಕೆಗೆ ಹೇಗೆ ಬೆದರಿಕೆ ಹಾಕುತ್ತೀರಿ? ನಾವು ಮತ್ತು ನಮ್ಮ ಸಮಾಜ ಇಂತಹದ್ದನ್ನು ಸಹಿಸುವುದಿಲ್ಲ’ ಎಂದು ಪೀಠವು ಅರ್ಜಿದಾರರಿಗೆ ಮೌಖಿಕ ಎಚ್ಚರಿಕೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.